ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ಪೋಲೀಸ್ ಆಯುಕ್ತರಲ್ಲಿ ಮನವಿ

ಮಂಗಳೂರು:  ಮಹಾನಗರ ಪಾಲಿಕೆಗೊಳಪಟ್ಟ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ನಿಯೋಗ ಮಾನ್ಯ ಪೋಲೀಸ್ ಆಯುಕ್ತರಲ್ಲಿ ಬೇಟಿ ಮಾಡಿ ವಿನಂತಿಸಲಾಯಿತು.

ಮಂಗಳೂರು ನಗರದ ಜಪ್ಪು ಮಹಾಕಾಳಿಪಡ್ಪು ಸುಮಾರು 50 ವರ್ಷಗಳಿಂದ ನಗರಪಾಲಿಕೆಗೆ ಒಳಪಟ್ಟಪ್ರದೇಶವಾಗಿದ್ದು ಸಾವಿರಾರು ಜನರು ಇಲ್ಲಿ ವಾಸವಾಗಿದ್ದಾರೆ. ಇಲ್ಲಿ ಮದುವೆ ಹಾಲ್‍ಗಳು, ಧಾರ್ಮಿಕ ಕೇಂದ್ರಗಳು, ವಿದ್ಯಾ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತದೆ, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಪ್ರದೇಶ ಮಂಗಳೂರು ನಗರಕ್ಕೆ ಅತೀ ಸಾಮಿಪ್ಯ ರಸ್ತೆಯಾಗಿದ್ದು  ಕೇರಳ, ಉಳ್ಳಾಲ, ಮುಡಿಪು, ದೇರಳಕಟ್ಟೆ ಪ್ರದೇಶದ ಜನರು ಈ ರಸ್ತೆಯನ್ನೇ ಅವಲಂಬಿಸಿರುತ್ತಾರೆ.

20160222-jeppu-mahakalipadpu

ದಿನಕ್ಕೆ ಸುಮಾರು 48 ರೈಲುಗಳು ಮಹಾಕಾಳಿ ಪಡ್ಪು ಮೂಲಕ ಹಾದು ಹೋಗುತ್ತಿದ್ದು, ರೈಲ್ವೇ ಗೇಟು ರೈಲು ಬರುವ 15 ನಿಮಿಷ ಮುಂಚಿತವಾಗಿ ಹಾಕುತ್ತಿದ್ದು, ದಿನದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದ್ದು,ಈ ಪ್ರದೇಶದಲ್ಲಿ ಓಡಾಡುವ ಪ್ರಯಾಣಿಕರು, ಅಂಬ್ಯುಲೆನ್ಸ್ , ಪೋಲೀಸ್ ತುರ್ತುವಾಹನಗಳು, ಶಾಲಾ ಮಕ್ಕಳು, ಅಧಿಕಾರಿಗಳು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಕಷ್ಟಪಡುತ್ತಿದ್ದಾರೆ, ಹೆಚ್ಚಿನ ಜನರು ಪಂಪುವೆಲ್ ಮೂಲಕ ನಗರವನ್ನು ಪ್ರವೇಶಿಸುವ ಬದಲು ಜಪ್ಪು ಈ ರಸ್ತೆಯನ್ನೇ ಅವಲಂಬಿಸಿರುವುದರಿಂದ ದಿನವೊಂದಕ್ಕೆ ಸುಮಾರು 10,000ಕ್ಕೂ ಹೆಚ್ಚು ಮಂದಿ ಈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಸಾವಿರಾರು ವಾಹನಗಳು ಈ ರಸ್ತೆಯ ಮೂಲಕವೇ ಹಾದು ಹೊಗುತ್ತಿದ್ದು ದಿನ ನಿತ್ಯ ಟ್ರಾಫಿಕ್ ಜ್ಯಾಂ ಆಗುತ್ತಿದೆ ಇದರಿಂದಾಗಿ ಇಲ್ಲಿ ಓಡಾಡುವ ಪ್ರಯಾಣಿಕರು, ಆಂಬ್ಯುಲೆನ್ಸ್ , ಪೋಲೀಸ್ ತುರ್ತು ವಾಹನಗಳು ಶಾಲಾ ಮಕ್ಕಳು ಅಧಿಕಾರಿಗಳು ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ  ಕಷ್ಟ ಅನುಭವಿಸುತ್ತಿದ್ದಾರೆ ಕೂಡಲೇ ನಗರಪಾಲಿಕೆ ಹಾಗೂ ರೈಲ್ವೇ ಇಲಾಖೆ ಸಮಸ್ಯೆಯನ್ನು ಪರಿಹರಿಸಲು ಕೂಡಲೇ ಕೆಳಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯವಾಗಿದೆ.ಈ ಬಗ್ಗೆ ಹಲವಾರು ಬಾರಿ ಬೃಹತ್ ಜಾಥಾ , ರಸ್ತೆ ತಡೆ ಬಂದ್ ಕೂಡ ಹಮ್ಮಿಕೊಂಡು ಪ್ರತಿಭಟನೆ ಮಾಡಲಾಗಿತ್ತು ಈ ಪ್ರತಿಭಟನೆಯ ಬಲಿಕ ರಸ್ತೆ ಡಾಮರೀಕರಣ ವಾಗಿದೆ, ಒಳಚರಂಡಿ ಹಾಗೂ ಕೆಳಸೇತುವೆಯಲ್ಲಿ ಸರ್ವೆ ಕೆಲಸಗಳನ್ನು ಮಾಡಿರುತ್ತಾರೆ.

ಸದ್ರಿ ಸ್ಥಳಗಳಲ್ಲಿ ಟ್ರಾಫಿಕ್ ಬ್ಲಾಕ್ ಆಗುತ್ತಿರುವುದರಿಂದ ದಿನನಿತ್ಯ ವಾಹನ ಸವಾರರಲ್ಲಿ ಜಗಳಗಳಾಗಿರುತ್ತದೆ ತಾವು ಸದ್ರಿ ಪ್ರದೇಶಕ್ಕೆ ಬೆಳಿಗ್ಗೆ 7.30ರಿಂದ 9.30 ಹಾಗೂ ಸಂಜೆ 5.30 ರಿಂದ 8.30ರ ವರೆಗೆ ಪೋಲೀಸ್ ಸಿಬ್ಬಂಧಿ ನಿಯೋಜನೆ ಮಾಡಬೇಕಾಗಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ನಿಯೋಗ ಮಾನ್ಯ ಪೋಲೀಸ್ ಆಯುಕ್ತರಲ್ಲಿ ಬೇಟಿ ಮಾಡಿ ವಿನಂತಿಸಲಾಯಿತು

ಯೋಗೀಶ್ ಶೆಟ್ಟಿ ಜಪ್ಪು – ಸ್ಥಾಪಕ ಅಧ್ಯಕ್ಷರು ಕೇಂದ್ರೀಯ ಮಂಡಲಿ, ತುಳುನಾಡ ರಕ್ಷಣಾ ವೇದಿಕೆ (ರಿ), ಪ್ರಶಾಂತ್ ರಾವ್ ಕಡಬ ಪ್ರಧಾನ ಕಾರ್ಯದರ್ಶಿಗಳು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ, ರಾಜ್ ಗೋಪಾಲ್, ಸಿರಾಜ್ ಅಡ್ಕರೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಯುವ ಘಟಕ,  ಶರೀಪ್, ನವಾಝ್, ವಿದ್ಯಾ, ದಿನೇಶ್ ಅರೇಕೆರೆ ಬೈಲು, ವಿವೇಕ್ ರಾವ್, ವಿಜಯ್ ಕುಮಾರ್ ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.

1 Comment

Leave a Reply