ಮಂಗಳೂರು: ಜೆ.ಆರ್‌. ಲೋಬೊ ; ಬಿಜೈ-ಆನೆಗುಂಡಿ ಕಾಂಕ್ರಿಟ್‌ ರಸ್ತೆ ಉದ್ಘಾಟನೆ

ಮಂಗಳೂರು: ನಗರದ ಬಿಜೈ-ಆನೆಗುಂಡಿ ನಡುವೆ ಮುಖ್ಯಮಂತ್ರಿಗಳ ವಿಶೇಷ ನಿಧಿ 1.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರಿಟ್‌ ರಸ್ತೆಯನ್ನು ಶಾಸಕ ಜೆ.ಆರ್‌. ಲೋಬೊ ಉದ್ಘಾಟಿಸಿದರು.

bejai-road-20150927-003 bejai-road-20150927-006 bejai-road-20150927-007 bejai-road-20150927-004 bejai-road-20150927-016

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಹಲವು ರಸ್ತೆಗಳು ಕಾಂಕ್ರಿಟೀಕರಣಗೊಂಡಿದೆ. ಪಾದಚಾರಿಗಳಿಗೆ ಅನುಕೂಲವಾಗಲು ಶೀಘ್ರ ಫ‌ುಟ್‌ಪಾತ್‌ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೆ ಮಹಾ ನಗರಪಾಲಿಕೆಯಲ್ಲಿ ಚರ್ಚೆಗಳು ನಡೆದಿದ್ದು, ಭರವಸೆ ನೀಡಿ ರುವಂತೆ ಫ‌ುಟ್‌ಪಾತ್‌ ನಿರ್ಮಾಣವಾಗಲಿದೆ. ಜೊತೆಗೆ ಒಳಚರಂಡಿ ಕಾಮಗಾರಿ ಶೀಘ್ರ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಮನಪಾ ಸಚೇತಕ ಶಶಿಧರ್‌ ಹೆಗ್ಡೆ, ಮನಪಾ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವ ಮರೋಳಿ, ಮನಪಾ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್‌ ಪೂಜಾರಿ, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಸಾಲ್ಯಾನ್‌, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್‌, ಮನಪಾ ಸದಸ್ಯರಾದ ರೂಪಾ ಡಿ. ಬಂಗೇರ, ನಾಗವೇಣಿ, ಅಖೀಲ ಆಳ್ವ, ಬಿಲ್ಲವ ಮುಖಂಡ ನವೀನ್‌ಚಂದ್ರ ಸುವರ್ಣ, ಗುತ್ತಿಗೆದಾರ ಎಂ.ಜಿ. ಹುಸೈನ್‌, ಎಂಜಿನಿಯರ್‌ ರಘುಪಾಲ್‌ ಉಪಸ್ಥಿತರಿದ್ದರು. ಸ್ಥಳೀಯ ಕಾರ್ಪೊರೇಟರ್‌ ಲ್ಯಾನ್ಸಿಲಾಟ್‌ ಪಿಂಟೊ ಸ್ವಾಗತಿಸಿದರು.

Leave a Reply

Please enter your comment!
Please enter your name here