ಮಂಗಳೂರು :  ಜೇಸಿ ಸಪ್ತಾಹ ; ನೃತ್ಯ ಸ್ಪರ್ಧೆಯಲ್ಲಿ ಶ್ವೇತಾ ಎಸ್ ರಾವ್ ದ್ವೀತಿಯ ಸ್ಥಾನ

ಮಂಗಳೂರು : ಜೆಸಿಐ ಮಂಗಳೂರು ಲಾಲ್ ಬಾಗ್. ಜೇಸಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ, ಡಾನ್ಸ್ ಪಲ್ಸ್-2015ರ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಶ್ವೇತಾ ಎಸ್ ರಾವ್ ದ್ವಿತೀಯ ಸ್ಥಾನ ಗಳಿಸಿದ್ದಾಳೆ.

JCI

ಉರ್ವದ ಕೆನರಾ ಹೈಸ್ಕೂಲಿನಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಶ್ವೇತಾ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಅರೆಹೊಳೆ ಪ್ರತಿಷ್ಠಾನದ ಆಶ್ರಯದ ನಂದಗೋಕುಲ ತಂಡವನ್ನು ಮುನ್ನಡೆಸುತ್ತಿದ್ದಾಳೆ.  ಜೇಸಿ ಸದಾನಂದ ನಾವುಡ ಅವರು ಪ್ರಶಸ್ತಿ ನೀಡಿದರು. ಕೇದಿಗೆ ಅರವಿಂದ ರಾವ್, ಪೀಟರ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು

Leave a Reply