ಮಂಗಳೂರು : ಜ.5ರಿಂದ ನಂದಿನಿ ಹಾಲು, ಮೊಸರಿನ ದರ ಏರಿಕೆ

ಮಂಗಳೂರು : ರಾಜ್ಯಾ ದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆ ಯನ್ನು ಪರಿಷ್ಕರಿಸಲಾಗಿದ್ದು, ಜ.5ರಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ. ಪರಿಷ್ಕೃತ ದರದಂತೆ ನಂದಿನಿ ಟೋನ್‌x ಹಾಲು ಅರ್ಧ ಲೀಟರ್‌ 17 ರೂ., ಒಂದು ಲೀ. 34 ರೂ., ಹೋಮೊ ಜಿನೈಸ್ಡ್ ಹಸುವಿನ ಹಾಲು 515 ಮಿ.ಲೀ. 19 ರೂ., 6 ಲೀ. ಜಂಬೊ ಪ್ಯಾಕ್‌ 222 ರೂ., ಶುಭಂ ಹಾಲು ಅರ್ಧ.ಲೀ. 20 ರೂ., ಸಮೃದಿಟಛಿ ಹಾಲು ಅರ್ಧ.ಲೀ.21 ರೂ., ಮೊಸರು 200 ಗ್ರಾಂ 10 ರೂ., 415 ಗ್ರಾಂ 19 ರೂ., 1 ಕೆ.ಜಿ. 41 ರೂ., ಹಾಗೂ 6 ಕೆ.ಜಿ. ಜಂಬೊ ಪ್ಯಾಕ್‌ 240 ರೂ. ಆಗಿರುತ್ತದೆ. ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನಿ ರುವ ಹಳೆಯ ದರ ನಮೂದಿಸಿರುವ
ಪ್ಯಾಕಿಂಗ್‌ ಅಜಿ ಮುಗಿಯುವವರೆಗೆ ಅದೇ ಅಜಿನಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಪ್ಯಾಕ್‌ ಮಾಡಿ ಸರಬರಾಜು ಮಾಡಲಾಗುವುದು. ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರ್‌ಗಳು ಪರಿಷ್ಕೃತ ದರ ದಲ್ಲೇ ವ್ಯವಹರಿಸಿ ಸಹಕರಿಸುವಂತೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ಕೋರಿದ್ದಾರೆ.

Leave a Reply

Please enter your comment!
Please enter your name here