ಮಂಗಳೂರು: ಡುಂಡಿರಾಜ್ ಸಾಹಿತ್ಯ ಪಿಹೆಚ್‍ಡಿ ಅಧ್ಯಯನ ಯೋಗ್ಯ- ಡಾ.ಮಲ್ಲಿಪಟ್ಟಣ

ಮಂಗಳೂರು: ಡುಂಡಿರಾಜ್‍ ಅವರನ್ನು ವಿಶೇಷವಾಗಿ ಹನಿಗವನಗಳ ಮೂಲಕವೇ ಸಾಹಿತ್ಯಕ್ಷೇತ್ರ ಗುರುತಿಸಿದ್ದರೂ, ಅವರ ಸಾಹಿತ್ಯ ಪಿಹೆಚ್‍ಡಿ ಅಧ್ಯಯನ ಯೋಗ್ಯ ಎಂದು ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಹೇಳಿದರು. ಅವರು ನಗರದಲ್ಲಿ ಹೆಚ್‍ಡುಂಡಿರಾಜ್‍ ಅವರ ಹನಿಗವನ ಸಂಕಲನ ‘ಹನಿರಂಜನಿ’ಯನ್ನು ಬಿಡುಗಡೆಗೊಳಿಸಿ ಮಾತಾಡುತ್ತಿದ್ದರು.

Haniranjani

ಅವರ ಹನಿಗವನಗಳಲ್ಲಿ ವಾಕ್ಯಜೋಡಣೆ ಮತ್ತು ಅದನ್ನು ವಿಶೇಷವಾಗಿ ಬಳಸುವ ರೀತಿ ಅನನ್ಯ ಎಂದೂ ಅವರು ಹೇಳಿದರು. ಡುಂಡಿರಾಜ್‍ ಅವರ ಇತ್ತೀಚಿನ ಕೃತಿ ಬೋಳಾಯ ತಸ್ಮೈ ನಮ:ದ ಪರಿಚಯವನ್ನು ಮಾಡುತ್ತಾ, ಮಂಗಳೂರು ವಿಶ್ವ ವಿದ್ಯಾಲಯದಕನ್ನಡ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ, ನಿತ್ಯಜೀವನದ ಅನೇಕ ವಿಷಯಗಳು ಇಲ್ಲಿ ವಸ್ತುವಾಗಿದ್ದರೂ, ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕಾಲೇಜಿನ ಉಪನ್ಯಾಸಕಿ ಹಾಗೂ ಸಾಹಿತಿ ಭುವನೇಶ್ವರಿ ಹಗಡೆ, ಮಂಕುತಿಮ್ಮನ ಕಗ್ಗದ ನಂತರ ಅತ್ಯಂತ ಹೆಚ್ಚು ಕಡೆ ಬಳಸಿಕೊಳ್ಳುವ ಕನ್ನಡ ಸಾಹಿತ್ಯದ ರಚನೆಗಳಿದ್ದರೆ ಅದು ಡುಂಡಿರಾಜ್‍ರದ್ದು ಎಂದು ಹೇಳಿದರು. ಸಪ್ನ ಬುಕ್ಸ್ ಪ್ರಕಟಿಸಿದ್ದ ಹನಿರಂಜನಿ ಬಿಡುಗಡೆ ಸಮಾರಂಭವನ್ನು ಲಿಯೋಕ್ಲಬ್‍ಕದ್ರಿ ಹಿಲ್ಸ್, ಅರೆಹೊಳೆ ಪ್ರತಿಷ್ಠಾನ ಹಾಗೂ ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್‍ ಜಂಟಿಯಾಗಿ, ಸಾರಸ್ವತ ಪಯಣದಲ್ಲಿ ಆಯೋಜಿಸಿದ್ದುವು.

ಲಯನ್ಸ್‍ಕ್ಲಬ್‍ಕದ್ರಿ ಹಿಲ್ಸ್‍ಕೋಶಾಧಿಕಾರಿಜ್ಯೋತಿ ಕೆ ಭಟ್ ಸ್ವಾಗತಿಸಿ, ಶ್ರೀಧರ್ ವಂದಿಸಿದರು. ಅರೆಹೊಳೆ ಸದಾಶಿವ ರಾವ್ ನಿರೂಪಿಸಿದರು. ಲಯನ್ಸ್‍ಕ್ಲಬ್‍ ಕದ್ರಿ ಹಿಲ್ಸ್‍ ಅಧ್ಯಕ್ಷೆ ಪೂಜಾ ಪೈ, ಕನ್ನಡಾಭಿವೃದ್ಧಿಯ ಸಂಚಾಲಕ ರತ್ನಾಕರ್, ಸಾಹಿತಿ ಡುಂಡಿರಾಜ್ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here