ಮಂಗಳೂರು: ಡೆಂಗ್ಯೂ ಜ್ವರಕ್ಕೆ 23 ವರುಷದ ಭಟ್ಕಳ ಮಹಿಳೆ ಬಲಿ

ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಟ್ಕಳದ 23 ವರ್ಷದ ಮಹಿಳೆಯೋರ್ವರು ಡೆಂಗ್ಯೂ ಜ್ವರದಿಂದ ಸೋಮವಾರ ನಗರದ ಅಥೇನಾ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

dengue-fathima-bhatkal-20150615-001

ಮೃತರನ್ನು ಭಟ್ಕಳ ನಿವಾಸಿ ಸಾವೂದ್ ಅವರ ಪತ್ನಿ ಫಾತಿಮಾ ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸಾವುದ್ ತನ್ನ ಪತ್ನಿಯನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿದ್ದು ಸುಮಾರು 45 ದಿನ ಅಲ್ಲಿದ್ದರು ಬಳಿಕ ಭಟ್ಕಳಕ್ಕೆ ಆಗಮಿಸಿದ ಫಾತಿಮಾ ಜ್ವರದಿಂದ ಬಳಲಿ ಜೂನ್ 5 ರಂದು ಭಟ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಯಾವುದೇ ರೀತಿಯಲ್ಲಿ ಗುಣಮುಖರಾಗುವ ಲಕ್ಷಣ ಕಂಡುಬಾರದ ಹಿನ್ನಲೆಯಲ್ಲಿ ಮಂಗಳೂರಿನ ಅಥೆನಾ ಆಸ್ಪತ್ರೆಗೆ ಜೂನ್ 12 ರಂದು ದಾಖಲಿಸಲಾಗಿತ್ತು. ಅಸ್ಪತ್ರೆಯಲ್ಲಿ ಆಕೆಯನ್ನು ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿದೆ. ಜೂನ್ 14 ರಂದು ಆಕೆಯನ್ನು ತೀವೃ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಾವೂದ್ ಫಾತಿಮಾರನ್ನು 5 ವರ್ಷಗಳ ಹಿಂದೆ ವಿವಾಹವಾಗಿದ್ದು ಸಾವೂದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

Leave a Reply

Please enter your comment!
Please enter your name here