ಮಂಗಳೂರು: ತುಳುನಾಡ ಛಾಯಾಚಿತ್ರ ಸ್ಪರ್ಧೆ; ಅಪುಲ್ ಆಳ್ವ ಇರಾ ಪ್ರಥಮ ಪ್ರಶಸ್ತಿ

ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸಿದ ತುಳುನಾಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಅಪುಲ್ ಆಳ್ವಾ ಇರಾ ಪಡೆದಿರುತ್ತಾರೆ. ದ್ವಿತೀಯ ಪ್ರಶಸ್ತಿಯನ್ನು ನಿತ್ಯಾಪ್ರಕಾಶ್ ಬಂಟ್ವಾಳ, ತೃತೀಯ ಪ್ರಶಸ್ತಿಯನ್ನು ರವಿ ಪೆÇಸವಣಿಕೆ ಪಡೆದಿದ್ದಾರೆ. ಪ್ರಥಮ ಬಹುಮಾನ ಐದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಅದೇ ರೀತಿ ದ್ವಿತೀಯ ಪ್ರಶಸ್ತಿಗೆ ಮೂರು ಸಾವಿರ ರೂ. ಮತ್ತು ಪ್ರಶಸ್ತಿ, ತೃತೀಯ ಪ್ರಶಸ್ತಿಗೆ ಎರಡು ಸಾವಿರ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಉಳಿದಂತೆ ನಾಲ್ಕನೇ ಪ್ರಶಸ್ತಿಯನ್ನು ಮಲ್ಲಿಕಾ ಎಸ್.ಭಂಡಾರಿ ಹಾಗೂ ಐದನೇ ಪ್ರಶಸ್ತಿಯನ್ನು ರಾಜೇಂದ್ರ ಪಡೆದಿದ್ದು ಇವರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
ವಿಶ್ವ ತುಳುವೆರೆ ಪರ್ಬ 2014 ಸಂದರ್ಭದಲ್ಲಿ ತೆಗೆದ ಕ್ರಿಯಾತ್ಮಕ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಲಾಗಿತ್ತು. ಸ್ಪರ್ಧೆಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಚಿತ್ರಗಾರರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳನ್ನು ವಿಶ್ವ ತುಳುವರೆ ಪರ್ಬದ ‘ನೆಂಪು ಸಂಚಿ’ಯಲ್ಲಿ ಪ್ರಕಟಿಸಲಾಗಿದೆ. ವಿಜೇತರ ಛಾಯಾಚಿತ್ರಗಳನ್ನು ಜನವರಿ 3ರಂದು ಭಾನುವಾರ ಕಾವೂರು ಗಾಂಧಿನಗರದಲ್ಲಿರುವ ಮುಗ್ರೋಡಿ ಎನ್‍ಕ್ಲೇವ್ ಕಚೇರಿಯಲ್ಲಿ ಅಖಿಲಭಾರತ ತುಳು ಒಕ್ಕೂಟ (ರಿ) ಕುಡ್ಲ ಇದರ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ವಿಶ್ವತುಳುವೆರೆ ಪರ್ಬ ಸಮಿತಿಯ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ. ತೀರ್ಪುಗಾರರಾಗಿ ಯಜ್ಞ ಮಂಗಳೂರು, ವಸಂತ ರಾವ್ ಕೇದಿಗೆ ಸಹಕರಿಸಿದ್ದರು.

Leave a Reply

Please enter your comment!
Please enter your name here