ಮಂಗಳೂರು: ತೆಗಳುವುದರ ಬದಲು ಅವಕಾಶಗಳನ್ನು ಸದುಪಯೋಗಗೋಳಿಸಿ; ಉದ್ಯೋಗ ಮೇಳ ಉದ್ಘಾಟಿಸಿ ಹರೀಶ್ ಹಂದೆ

Spread the love

ಮಂಗಳೂರು: ಸರಕಾರ ಆಡಳಿತವನ್ನು ತೆಗಳುವುದನ್ನು ಬಿಟ್ಟು ವಿದ್ಯಾವಂತ ಯುವಕರು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಸೆಲ್ಕೊ ಸೋಲಾರ್ ಇದರ ಆಡಳಿತ ನಿರ್ದೇಶಕ ಹರೀಶ್ ಹಂದೆ ಹೇಳಿದರು.

07-udyoga-mela-20151119-006 08-udyoga-mela-20151119-007 09-udyoga-mela-20151119-008 10-udyoga-mela-20151119-009 11-udyoga-mela-20151119-010 12-udyoga-mela-20151119-011

ಅವರು ಗುರುವಾರ ಜಿಲ್ಲಾಡಳಿತದ ಮಹತ್ವಪೂರ್ಣ ಉದ್ಯೋಗ ಮೇಳಕ್ಕೆ ಮಂಗಳೂರು ಬೆಂಜನಪದುವಿನಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿದ್ಯಾವಂತ ಯುವಕರು ಯಾವಾಗ ಒಳ್ಳೆಯ ಕೆಲಸಗಳನ್ನು ಪಡೆಯಲು ಅಶಕ್ತರಾಗುತ್ತಾರೆ ಅಂತಹ ಯುವಕರು ಸಮಾಜದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಯುವಜನರು ಜಿಲ್ಲಾಡಳಿತ , ಸರಕಾರಗಳು ಏನು ಮಾಡುತ್ತಿಲ್ಲ ಎಂದು ದೂರುತ್ತಾ ಕಾಲ ಕಳೆಯುತ್ತಾರೆ. ಅವಕಾಶಗಳು ದೊರೆತಾದ ಅದನ್ನು ಸದುಪಯೋಗಪಡಿಸಿಕೊಳ್ಳುವ ಬದಲು ದೂಷಣೆ ಮಾಡುತ್ತಾ ಕಾಲ ಕಳೆಯುವುದನ್ನು ಯುವಜನರು ಬಿಡಬೇಕು ಕಾರಣ ಯುವಜನರು ದೇಶದ ಆಸ್ತಿಯಾಗಿದ್ದು ಅದನ್ನು ಮುನ್ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಅವರ ಮೇಲಿದೆ.

02-udyoga-mela-20151119-001 03-udyoga-mela-20151119-002 04-udyoga-mela-20151119-003 05-udyoga-mela-20151119-004 06-udyoga-mela-20151119-005

ಉದ್ಯೋಗ ಮೇಳವನ್ನು ಆಯೋಜಿಸಿದ ಜಿಲ್ಲಾಡಳಿತವನ್ನು ಅಭಿನಂದಿಸಿದ ಹರೀಶ್ ಹಂದೆ, ಪ್ರತಿವರ್ಷ ರಾಷ್ಟ್ರೀಯ ಮತ್ತು ಅಂತರಾಷ್ಟ್ರಿಯ ಮಟ್ಟದ ಸಂಶೋಧನಾ ವಸ್ತು ಪ್ರದರ್ಶನವನ್ನು ಆಯೋಜಿಸಬೇಕು ಇದರಿಂದ ಜಿಲ್ಲೆ ಇನ್ನಷ್ಟು ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಹಂತದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಜಾಗತಿಕ ಮಟ್ಟದ ಸರ್ವೆಯೊಂದರ ಪ್ರಕಾರ ಕರ್ನಾಟಕದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದೆ ಎನ್ನುವುದು ದಾಖಲಾಗಿದೆ ಆದರೆ ಪ್ರಚಾರಪಡಿಸಲು ನಾವು ಇನ್ನೂ ಕೂಡ ಹೇಳುವಂತಹ ಯಾವುದೇ ದೊಡ್ಡ ಪ್ರಯತ್ನಗಳನ್ನು ಮಾಡಿಲ್ಲ. ದೇಶದಲ್ಲಿ ಭಯೋತ್ಪಾದನೆ, ಜಾತಿ ಧರ್ಮಗಳ ಕಲಹ ಇವುಗಳ ಕುರಿತು ಚಿಂತಿಸಲು ನಮ್ಮಲ್ಲಿರುವ ಅರ್ಧ ಸಮಯವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಬದಲಾಗಿ ಅದನ್ನು ತಡೆಯುವ ಕುರಿತು ಮಾತ್ರ ಚಿಂತನೆ ನಡೆಸಲು ಮುಂದೆ ಬರುತ್ತಿಲ್ಲ. ಯುವಜನರು ಈ ಕುರಿತು ಚಿಂತಿಸಬೇಕು. ಸಿಕ್ಕ ಅವಕಾಶಗಳನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಉದ್ಯೋಗ ಮತ್ತು ತರಬೇತಿ ಸಂಸ್ಥೆಯ ಆಯುಕ್ತ ಮಂಜುನಾಥ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಮ್ ಮೋಹನ್ ಆಳ್ವಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಶರಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಶ್ರೀ ವಿದ್ಯಾ, ಮೇಯರ್ ಜಸಿಂತಾ ಆಲ್ಫ್ರೆಡ್, ಪಿಯುಸ್ ರೊಡ್ರಿಗಸ್, ಯಶವಂತ್ ಪ್ರೇಮಲತಾ, ಡಾ ಇಫ್ತಿಕಾರ್, ಗಣೇಶ್ ಭಟ್, ಇಬ್ರಾಹಿಂ ಕೋಡಿಜಾಲ್ ಇನ್ನಿತರರು ಉಪಸ್ಥಿತರಿದ್ದರು.


Spread the love