ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಂತ ಭಾಗ್ಯಯೋಜನೆ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಜಿಲ್ಲೆಯ ಆಶಾ ಸುಗಮಕಾರರ (Facilitators) ತರಬೇತಿಯನ್ನು ಆಯೋಜಿಸಲಾಯಿತು.

1-a

ದಕ್ಷಿಣ ಕನ್ನಡ ಜಿಲ್ಲೆಯ ಬಡತನ ರೇಖೆಗಿಂತ ಕಡಿಮೆ ಇರುವ (ಬಿ.ಪಿ.ಎಲ್ ಮತ್ತು ಅಂತ್ಯೋದಯ) 60 ವರ್ಷ ಮೇಲ್ಪಟ್ಟ ಅವಶ್ಯಕತೆಯಿದ್ದ ಹಿರಿಯ ನಾಗರಿಕರಿಗೆ ದಂತ ಪಂಕ್ತಿಯನ್ನು ಉಚಿತವಾಗಿ ಒದಗಿಸುವ ಸೌಲಭ್ಯವನ್ನು ಕರ್ನಾಟಕ ಸರಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಕೊಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಯಿತು.

ಸಭೆಯಲ್ಲಿ ಕರ್ನಾಟಕ ದಂತ ಆರೋಗ್ಯ ನೀತಿಯ ಅಧ್ಯಕ್ಷರಾದ ಹಾಗೂ ಯೆನೆಪೋಯ ದಂತ ಕಾಲೇಜಿನ ಪ್ರೊಫೆಸರ್ ಡಾ|| ಗಣೇಶ್ ಶಣೈ ಪಂಚಮಹಲ್‍ರವರು ಇದರ ಬಗ್ಗೆ ಸ್ಲೈಡ್ ಮುಖಾಂತರ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಸಭೆಯಲ್ಲಿ ಜಿಲ್ಲೆಯ ಆಶಾ ಸುಗಮಕಾರರು, ಎಲ್ಲಾ ಕಾಲೇಜುಗಳ ನೋಡೆಲ್ ಅಧಿಕಾರಿಗಳು, ದ.ಕ.ಜಿಲ್ಲೆಯ ದಂತ ಭಾಗ್ಯ ಯೋಜನೆಯ ನೋಡೆಲ್ ಅಫೀಸರ್ ಡಾ|| ಲವೀನಾ ಜೆ ನರೋನ್ಹ, ಸರಕಾರಿ ದಂತ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ. ರಾಮಕೃಷ್ಣ ರಾವ್, ಡಾ|| ಸಿಕಂದರ್ ಪಾಷ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಉಪಸ್ಥಿತರಿದ್ದರು.  ಡಾ|| ಮಲ್ಲಿಕಾರವರು, ದಂತ ಪಂಕ್ತಿಯ ವಿವಿಧ ಹಂತದಲ್ಲಿ ಮಾಡುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ದಂತ ಭಾಗ್ಯ ಯೋಜನೆಗೆ ಈ ಕೆಳಕಂಡ ಕಾಲೇಜುಗಳನ್ನು ಮತ್ತು ನೋಡೆಲ್ ಅಧಿಕಾರಿಗಳನ್ನು ಫಲಾನುಭವಿಗಳು ಸಂಪರ್ಕಿಸಬಹುದು. ಎ.ಜೆ.ಶೆಟ್ಟಿ ದಂತ ಕಾಲೇಜು, ಡಾ|| ಭರತ್ ಪ್ರಭು, ಯೆನಪೋಯ ದಂತ ಕಾಲೇಜು, ಡಾ|| ಲಕ್ಷ್ಮೀನಾರಾಯಣ್, ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ, ಡಾ|| ದುರ್ಗಾಪ್ರಸಾದ್, ಕಾಲೇಜ್ ಆಫ್ ಡೆಂಟಲ್ ಸಯನ್ಸ್, ಡಾ|| ಮಿಥುನ್ ಪೈ, ಎ.ಬಿ.ಶೆಟ್ಟಿ ದಂತ ಕಾಲೇಜು,  ಡಾ|| ಭರತ್‍ರಾಜ್ ಶೆಟ್ಟಿ, ಶ್ರೀನಿವಾಸ ಡೆಂಟಲ್ ಕಾಲೇಜು, ಡಾ|| ಐಫಾ, ದಕ್ಷಿಣ ಕನ್ನಡ ಜಿಲ್ಲಾ ನೋಡೆಲ್ ಅಧಿಕಾರಿ, ಡಾ|| ಲವೀನಾ ಜೆ ನರೋನ್ಹ, ಪ್ರಕಟನೆ ತಿಳಿಸಿದೆ.

Leave a Reply