ಮಂಗಳೂರು: ದ್ವಿಚಕ್ರ ವಾಹನ ಡಿಕ್ಕಿ: ಮಿಲಾಗ್ರಿಸ್ ಕಾಲೇಜಿನ ಎಟೆಂಡರ್ ಸಾವು

ಮಂಗಳೂರು: ದ್ವಿಚಕ್ರ ವಾಹನ ಡಿಕ್ಕಿಯಾಗಿ ತೀವೃ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ಜರುಗಿದೆ.

john-montiero-20150611

ಮೃತಪಟ್ಟವರನ್ನು ಮಂಗಳೂರು ಮಿಲಾಗ್ರಿಸ್ ಪಿಯು ಕಾಲೇಜಿನ ಎಟೆಂಡರ್ ಮಾರ್ಟಿನ್ ಜೋನ್ ಮೊಂತೆರೊ (59) ಎಂದು ಗುರುತಿಸಲಾಗಿದೆ.

ಮೃತರು ಬುದವಾರ ಸಂಜೆ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಜೆಪ್ಪು ನಂದಿಗುಡ್ಡ ಬಳಿ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದು, ತೀವೃ ಗಾಯಗೊಂಡ ಜೋನ್ ಅವರನ್ನು ಮಂಗಳೂರು ಫಾ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಗುರುವಾರ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply