ಮಂಗಳೂರು ನರಕ ಎಂದು ಎಲ್ಲಿಯೂ ಹೇಳಿಲ್ಲ; ಮಾಜಿ ಸಂಸದೆ ರಮ್ಯಾ ಹೇಳಿಕೆ

ಮಂಗಳೂರು ನರಕ ಎಂದು ಎಲ್ಲಿಯೂ ಹೇಳಿಲ್ಲ; ಮಾಜಿ ಸಂಸದೆ ರಮ್ಯಾ ಹೇಳಿಕೆ

ಮಂಗಳೂರು: ನಾನು ಯಾವತ್ತೂ ಕೂಡ ಮಂಗಳೂರು ನರಕ ಎನ್ನುವ ಮಾತನ್ನು ಹೇಳಿಲ್ಲ ಎಂದು ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

image001politician-ramya-mangaluru-20160825-001 image002politician-ramya-mangaluru-20160825-002 image003politician-ramya-mangaluru-20160825-003 image004politician-ramya-mangaluru-20160825-004 image005politician-ramya-mangaluru-20160825-005 image006politician-ramya-mangaluru-20160825-006 image007politician-ramya-mangaluru-20160825-007 image008politician-ramya-mangaluru-20160825-008 image009politician-ramya-mangaluru-20160825-009 image010politician-ramya-mangaluru-20160825-010 image011politician-ramya-mangaluru-20160825-011 image012politician-ramya-mangaluru-20160825-012 image013politician-ramya-mangaluru-20160825-013 image014politician-ramya-mangaluru-20160825-014 image015politician-ramya-mangaluru-20160825-015 image016politician-ramya-mangaluru-20160825-016 ramya-mangaluru

ಅವರು ಗುರುವಾರ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಜೊತೆ ಮಾತನಾಡಿ ನಾನು ಮಂಗಳೂರಿನ ಕುರಿತಾಗಿ ಅಂತಹ ಯಾವುದೇ ಕೆಟ್ಟ ಪದವನ್ನು ಬಳಸಿಲ್ಲ ಆದರೆ ಟಿವಿ ಚಾನಲೊಂದು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ನರಕ ಅನ್ನುವುದು ಸರಿಯಲ್ಲ ಅದರಲ್ಲೂ ನನ್ನ ಪ್ರೀತಿಯ ಊರಾದ ಮಂಗಳೂರನ್ನು ಯಾಕೆ ನಾನು ನರಕ ಎಂದು ಕರೆಯಲಿ. ನಾನು ಇಂದಿಗೂ ಎಂದೆಂದಿಗೂ ಮಂಗಳೂರನ್ನು ಪ್ರೀತಿಸುತ್ತೇನೆ ಯಾಕೆಂದರೆ ನನ್ನ ಪ್ರಥಮ ಚುನಾವಣಾ ಪ್ರಚಾರವನ್ನು ನಾನು ಆರಂಭಿಸಿದ್ದು ಮಂಗಳೂರಿನಲ್ಲಿ ಆದ್ದರಿಂದ ಮಂಗಳೂರಿನ ಮೇಲೆ ನನಗೆ ಪ್ರೀತಿಯಿದೆ ಅಲ್ಲದೆ ನನ್ನ ಹೆಚ್ಚಿನ ಗೆಳೆಯರು ಮಂಗಳೂರಿನವರು ಎಂದರು.

ರಮ್ಯಾ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಲ್ಲದೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದು, ಬಿಗಿ ಭದ್ರತೆಯೊಂದಿಗೆ ರಮ್ಯಾರನ್ನು ನಗರಕ್ಕೆ ಪೋಲಿಸರು ಕರೆತಂದರು.

 

Leave a Reply

Please enter your comment!
Please enter your name here