ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಖಂಡನೆ

ಮಂಗಳೂರು: ಮೂಡಬಿದ್ರೆಯಲ್ಲಿ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಮಾಡಿದ ಮಾಹಿತಿ  ತಿಳಿದು ಘಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ  ನಮ್ಮ ಟಿವಿ ವರದಿಗಾರ ರಾಘವೇಂದ್ರ ಮತ್ತು ಸಂಜೆವಾಣಿ ಪತ್ರಿಕೆಯ ವರದಿಗಾರ ಶರತ್ ಎಂಬವರ ಮೇಲೆ ಹಲ್ಲೆ ನಡೆಸಿ ಕ್ಯಾಮರಾಗೆ ಹಾನಿ ಉಂಟು ಮಾಡಿದ ದುಷ್ಕರ್ಮಿಗಳ ಕೃತ್ಯವನ್ನು  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ  ಖಂಡಿಸುತ್ತದೆ.

ತಪ್ಪಿತಸ್ಥರ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಸಂದರ್ಭ ಪತ್ರಕರ್ತರಿಗೆ ಸೂಕ್ತ ರಕ್ಷಣೆ  ನೀಡಬೇಕು ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥಶೆಟ್ಟಿ ಬಾಳ ಅವರು ಪೊಲೀಸ್ ಇಲಾಖೆಯ  ವರಿಷ್ಠರನ್ನು ಒತ್ತಾಯಿಸಿದ್ದಾರೆ.

Leave a Reply

Please enter your comment!
Please enter your name here