ಮಂಗಳೂರು: ಪತ್ರಿಕಾಗೋಷ್ಟಿಗೆ ಸರಕಾರಿ ಕಾರು ಬಿಟ್ಟು ರಿಕ್ಷಾದಲ್ಲಿ ಆಗಮಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ರಾಜ್ಯದ ಆರೋಗ್ಯ ಸಚಿವ ಯು ಟಿ ಖಾದರ್ ಸದಾ ಒಂದಿಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ತನ್ನ ಮಾನವೀಯ ದೃಷ್ಟಿ, ಸಾಮಾನ್ಯರಾಗಿ ಬದುಕುವ ಗುಣ, ಇತರರಿಗಾಗಿ, ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ ಹೃದಯವುಳ್ಳ ಖಾದರ್ ಅವರ ಈದ್ ಉಲ್ ಫಿತರ್ ಹಬ್ಬದ ದಿನ ಕೂಡ ತನ್ನ ವಿಶೇಷ ಗುಣದಿಂದ ಮತ್ತೊಮ್ಮೆ ಮಾಧ್ಯಮದವರ ಪ್ರೀತಿಗೆ ಪ್ರಾತ್ರರಾಗಿದ್ದಾರೆ. ಅದು ಬೇರೆ ಯಾವ ವಿಷಯದಲ್ಲಿ ಅಲ್ಲ ಬದಲಾಗಿ ತಾನು ಆಯೋಜಿಸಿದ ಪತ್ರಿಕಾಗೋಷ್ಟಿಗೆ ತನ್ನ ಸರಕಾರಿ ಕಾರನ್ನು ಬಿಟ್ಟು ರಿಕ್ಷಾದಲ್ಲಿ ಬಂದು ಸುದ್ದಿಯಾಗಿದ್ದಾರೆ.

3-minister-khader-auto-002 4-minister-khader-auto-003

ಯುಟಿ ಖಾದರ್ ನಗರದ ಈಡನ್ ಕ್ಲಬ್ ನಲ್ಲಿ ಆರೋಗ್ಯ ಇಲಾಖೆಯ ಕುರಿತಾದ ಪತ್ರಿಕಾಗೋಷ್ಟಿಯನ್ನು ಮಧ್ಯಾಹ್ನ 1 ಗಂಟೆಗೆ ಆಯೋಜಿಸಿದ್ದರು. ಪತ್ರಿಕಾಗೊಷ್ಟಿಗೆ ಮುನ್ನ ನಿಟ್ಟೆ ಆಸ್ಪತ್ರೆಯಲ್ಲಿ ಜರುಗಿದ ಈದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಕದ್ರಿ ದೇವಸ್ಥಾನದಲ್ಲಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷೆ ಯಶವಂತಿ ಆಳ್ವರ ವೈಕುಂಠ ಸಮಾರಾಧನೆ ಕಾರ್ಯಕ್ರದಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾಗೋಷ್ಟಿಗೆ ತೆರಳಲು ಅಣಿಯಾದ ಖಾದರ್ ಅವರ ಕಾರು ಪಾರ್ಕಿಂಗ್ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡು ತೆರಳಲು ಅಸಾಧ್ಯವಾಯಿತು. ಪತ್ರಿಕಾಗೋಷ್ಟಿಗೆ ವಿಳಂಬವಾಗಬಹುದು ಎನ್ನುವ ಮುನ್ಸೂಚನೆ ಅರಿತ ಖಾದರ ಪಕ್ಕದಲ್ಲಿ ಇದ್ದ ರಿಕ್ಷಾಸ್ಟ್ಯಾಂಡ್ ನ ರಿಕ್ಷಾ ಹಿಡಿದು ಪತ್ರಿಕಾಗೋಷ್ಟಿಗೆ ತೆರಳಿದರು. ಆದರೂ ಖಾದರ್ ಪತ್ರಿಕಾಗೋಷ್ಟಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲ ಅಸಾಧ್ಯವಾದರೂ ಅರ್ಧ ಗಂಟೆ ವಿಳಂಬವಾಗಿ ಪತ್ರಿಕಾಗೋಷ್ಟಿ ಆರಂಭಿಸಿದರು.

Leave a Reply