ಮಂಗಳೂರು : ಪಬ್‌ನಲ್ಲಿ ಯುವಕನ ಮೇಲೆ ಮಾಲಕ ಹಾಗೂ ಸಿಬ್ಬಂದಿ ಹಲ್ಲೆ: ದೂರು

ಮಂಗಳೂರು : ನಗರದ ಪಬ್‌ವೊಂದರಲ್ಲಿ ಯುವಕ ನೋರ್ವನ ಮೇಲೆ ಮಾಲಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಸ್ಟೀಫನ್‌ ಎಂದು ಗುರುತಿಸಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗ ರ ದ ‌ಎಂಪೈರ್‌ ಮಾಲ್‌ನಲ್ಲಿರುವ ಪಬ್‌ಗ ಸ್ಟೀಫನ್‌ ಪಾರ್ಸೆಲ್‌ ತೆಗೆದುಕೊಳ್ಳಲು ಬಂದಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಬ್‌ನ ಬೌನ್ಸರ್‌ ನಿಶಾಂತ್‌ ಶೆಟ್ಟಿ ಎಂಬಾತ ಆತನನ್ನು ಅಲ್ಲಿಂದ ಹೊರ ನಡೆಯಲು ಹೇಳಿದ್ದರಿಂದ ನಿಶಾಂತ್‌ ಮತ್ತು ಸ್ಟೀಫನ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ನಿಶಾಂತ್‌ ಸ್ಟೀಫನ್‌ನನ್ನು ಹೊರದಬ್ಬಿದ್ದಾನೆ. ಘಟನೆಯನ್ನು ನೋಡುತ್ತಿದ್ದ ಮಾಲಕರ ಗನ್‌ ಮ್ಯಾನ್‌ ತನ್ನ ಗನ್‌ನಿಂದ ಸ್ಟೀಫನ್‌ನ ತಲೆಗೆ ಹಲ್ಲೆ ನಡೆಸಿದ್ದಾನೆ ಎಂದು ಸ್ಟೀಫ‌ನ್‌ ಆರೋಪಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply