ಮಂಗಳೂರು: ಪೊಸೊಟ್ಟು ತಂಙಳ್ ರವರ ನಿಧನಕ್ಕೆ ಯು.ಟಿ.ಖಾದರ್ ಸಂತಾಪ

ಮಂಗಳೂರು: ಇಂದು ನಿಧನರಾದ ಮುಸ್ಲಿಂ ರ ಆಧ್ಯಾತಿಕ ಗುರುಗಳಾದ  ಪೊಸೊಟ್ಟು ಉಮರ್ ಫಾರೂಕ್ ತಂಙಳ್ ಅವರ ನಿಧನಕ್ಕೆ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ತಮ್ಮ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

ಆಧ್ಯಾತ್ಮಿಕ ಮತ್ತು ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ತಂಙಳ್ ಅವರ ಸೇವೆ ಅಪಾರವಾಗಿದೆ, ಅತ್ಯಂತ ಸರಳ ಜೀವನ ನಡೆಸಿ ಜನಸಾಮಾನ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ತಂಙಳ್ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಆರೋಗ್ಯ ಸಚಿವರು ತಮ್ಮ ಸಂತಾಪ ವ್ಯಕ್ತಪಡಿಸಿದರು.

Leave a Reply

Please enter your comment!
Please enter your name here