ಮಂಗಳೂರು: ಇಬ್ಬರು ಯುವಕರಿಗೆ ಚೂರಿ ಇರಿತ ; ಒರ್ವ ಸಾವು ಇನ್ನೋರ್ವ ಗಂಭೀರ : 144 ಸೆಕ್ಷನ್ ಜಾರಿ

ಮಂಗಳೂರು:  ಇಬ್ಬರು ಯುವಕರಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ ಪ್ರಕರಣ ನಡೆದಿದ್ದು, ಒರ್ವ ಯುವಕ ಬಲಿಯಾಗಿ ಇನ್ನೋರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

mangaluru-28-year-old-harish-stabbed-to-death-in-bantwal-20151112 mangaluru-28-year-old-harish-stabbed-to-death-in-bantwal-20151112-001 mangaluru-28-year-old-harish-stabbed-to-death-in-bantwal-20151112-002 mangaluru-28-year-old-harish-stabbed-to-death-in-bantwal-20151112-003

ಪ್ರಕರಣದಲ್ಲಿ ಬಂಟ್ವಾಳ ತಾಲೂಕು ವಗ್ಗ ಬಳಿ ಹರೀಶ್ (28) ತನ್ನ ಮನೆಗೆ ವಾಪಾಸು ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ತಮ್ಮ ಸ್ಯಾಂಟ್ರೊ ಕಾರಿನಲ್ಲಿ ಬಂದು ಇರಿದು ಪರಾರಿಯಾಗಿದ್ದು, ಹರೀಶ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹರೀಶ್ ಶರೀರವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದ್ದು, ಬಂಟ್ವಾಳ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.   ಸಮೀವುಲ್ಲಾ ಎನ್ನುವ ಯುವಕನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ್ದಿದ್ದು, ಗಂಭಿರ ಗಾಯಗೊಂಡ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳು ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಜಿಲ್ಲೆಯ ಕೆಲವೊಂದು ಪ್ರದೇಶದಲ್ಲಿ ಘರ್ಷಣೆಗಳು ಜರುಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಹಾಕಲಾಗಿದೆ.

Leave a Reply