ಮಂಗಳೂರು: ಫ‌ರಂಗಿಪೇಟೆ ಭೂಕುಸಿತ, ತಲಪಾಡಿ ಚೂರಿ ಇರಿತ: ಸಚಿವ ಖಾದರ್‌ ಭೇಟಿ ಕ್ರಮಕ್ಕೆ ಸೂಚನೆ

ಮಂಗಳೂರು: ಫ‌ರಂಗಿಪೇಟೆಯಲ್ಲಿ ಗುಡ್ಡ ಕುಸಿದು 3 ಜನ ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಗುರುವಾರ ಭೇಟಿ ನೀಡಿದರು.

utkhader-visit-netaji-20150717-006 utkhader-visit-netaji-20150717-001

ಘಟನಾ ಸ್ಥಳದ ಪರಾಮರ್ಶೆ ನಡೆಸಿದ ಸಚಿವರು, ಇದರ ಪಕ್ಕದಲ್ಲೇ ಅಪಾಯದಂಚಿನಲ್ಲಿರುವ 6 ಮನೆಗಳಿಗೆ ಯಾವುದೇ ತೊಂದರೆಯಾಗದಂತೆ ಸಂರಕ್ಷಿಸಲು ಹಾಗೂ ಈ ಮನೆಯ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಹೆಚ್ಚಿನ ಮಣ್ಣು ಕುಸಿತವಾಗದಂತೆ ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

utkhader-visit-netaji-20150717-014

ಬಳಿಕ ಜುಲೈ 15 ರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿ ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್ ಅವರನ್ನು ಭೇಟಿ ಮಾಡಿದ ಖಾದರ್ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಎಸಿಪಿ ಕಲ್ಯಾಣ್ ಶೆಟ್ಟಿ ಅವರಿಗೆ ಸೂಚಿಸಿದರು. ಇತ್ತೀಚೆಗೆ ತಲಪಾಡಿ ಉಳ್ಳಾಲ ಪರಿಸರದಲ್ಲಿ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆಗಳು ನಡೆಯುತ್ತಿದ್ದು ಇಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸಿದರು.

 

 

 

Leave a Reply