ಮಂಗಳೂರು: ಬಲ್ಮಠದ ಎಲೆಕ್ಟ್ರಾನಿಕ್ಸ್ ಮಳಿಗೆಗೆ ನುಗ್ಗಿದ ಕಳ್ಳರು;20 ಲಕ್ಷ ಮೌಲ್ಯದ ಸೊತ್ತು ಕಳವು

ಮಂಗಳೂರು: ನಗರದ ಬಲ್ಮಠದಲ್ಲಿರುವ ಆ್ಯಪಲ್ ಉತ್ಪನ್ನಗಳ ಮಳಿಗೆ ಮೆಪಲ್ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಸೋಮವಾರ ಮುಂಜಾನೆ ಕಳ್ಳರು ನುಗ್ಗಿ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಸ್ಟೋರ್‌ನ ಹಿಂಬದಿಯ ಗೋಡೆಗೆ ಅಳವಡಿಸಿದ ಎಲೆಕ್ಟ್ರಿಕಲ್ ಜಂಕ್ಷನ್ ಬೋರ್ಡ್ ಕಿತ್ತು ಅಲ್ಲಿಂದ ಒಳಗೆ ಪ್ರವೇಶಿಸಿದ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಮಳಿಗೆ ಒಳಗಡೆ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಮೂವರು ಆರೋಪಿಗಳ ಚಲನ ವಲನ ಕಂಡು ಬಂದಿದೆ.

ಕಳ್ಳರು ಒಳ ಹೊಕ್ಕ ತಕ್ಷಣ ಮುಂಬಯಿಯಲ್ಲಿರುವ ಕಂಪನಿಯ ಸೆಕ್ಯೂರಿಟಿ ಏಜೆನ್ಸಿಗೆ ಅಲರ್ಟ್ ಮೆಸೇಜ್ ಹೋಗಿದ್ದು,  ತಕ್ಷಣ ಅಲ್ಲಿಂದ ಮಂಗಳೂರು ಬಲ್ಮಠದ ಮೆಪಲ್ ಮಳಿಗೆಯ ಮ್ಯಾನೇಜರ್‌ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಮ್ಯಾನೇಜರ್ ಮನೆ ಕೋಡಿಕಲ್‌ನಲ್ಲಿದ್ದು, ಮುಂಬಯಿಯಿಂದ ಕರೆ ಬಂದ ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡದೆ ನೇರವಾಗಿ ಬಲ್ಮಠ ಮೆಪಲ್ ಮಳಿಗೆಗೆ ಆಗಮಿಸಿದ್ದಾರೆ.  ಮೊಬೈಲ್ ಹಾಗೂ ಇತರ ಆ್ಯಪಲ್ ಕಂಪನಿಯ ಸೊತ್ತುಗಳ ಜತೆಯಲ್ಲಿ ಮಳಿಗೆಯಲ್ಲಿ ಶನಿವಾರ ಸಂಗ್ರಹವಾಗಿದ್ದ ಸುಮಾರು 2.5 ಲಕ್ಷ ರೂಗಳನ್ನು ಹೊತ್ತೊಯ್ದಿದ್ದಾರೆ.

ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply