ಮಂಗಳೂರು: ಬಸ್‌ ಬ್ರೇಕ್‌ಫೇಲ್‌ ನಂತೂರು ಸಮೀಪ ಸರಣಿ ಅಪಘಾತ: ಐವರಿಗೆ ಗಾಯ

ಮಂಗಳೂರು: ನಗರದ ನಂತೂರು ಸಮೀಪ ಖಾಸಗಿ ಬಸ್‌ ಬ್ರೇಕ್‌ಫೇಲ್‌ ಆಗಿ ಸರಣಿ ಅಪಘಾತಕ್ಕೆ ಉಂಟಾಗಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.

01-accident-20150725 13-accident-20150725-012 11-accident-20150725-010

ಪ್ರಮೀಳಾ ಡಿಸೋಜ (28), ರಿಕ್ಷಾ ಚಾಲಕ ಲಿಂಗಪ್ಪ (50), ಹರ್ಷ ನಾಯಕ್ (23), ಸುಪ್ರಿಯಾ ನಾಯಕ್ (24) ಹಾಗೂ ಕಾಲೇಜು ವಿದ್ಯಾರ್ಥಿನಿ ವೀಕ್ಷಾ ಶೆಟ್ಟಿ (16) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಳಲಿಯಿಂದ ಮಂಗಳೂರಿಗೆ ಬರುತ್ತಿದ್ದ ಶ್ರೀ ವಾಸುಕಿ ಎಂಬ ಹೆಸರಿನ ಖಾಸಗಿ ಬಸ್ ನಂತೂರು ದಾಟಿ ಚೆಫ್ ರೆಸ್ಟೊರೆಂಟ್ ಸಮೀಪ ಬರುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಯಿತು. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮುಂದಿನಿಂದ ಹೋಗುತ್ತಿದ್ದ ದ್ವಿಚಕ್ರ ವಾಹನ, ಆಟೊ ರಿಕ್ಷಾ, ಕಾರು ಹಾಗೂ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಿಂದ ಕದ್ರಿ- ನಂತೂರು ರಸ್ತೆ ಸಂಚಾರ ಸಂಪೂರ್ಣ ಅಸ್ಯವ್ಯಸ್ತಗೊಂಡಿತ್ತು. ಇದರ ಪರಿಣಾಮ ನಂತೂರು ವೃತ್ತದಲ್ಲೂ ವಾಹನ ದಟ್ಟಣೆ ಉಂಟಾಯಿತು. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು. ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply