ಮಂಗಳೂರು : ಬಿಜೆಪಿಯನ್ನು ಸರ್ವನಾಶ ಮಾಡಲು ಸುಬ್ರಮಣ್ಯನ್ ಸ್ವಾಮಿ ಒಬ್ಬರೇ ಸಾಕು : ಜನಾರ್ದನ ಪೂಜಾರಿ

ಮಂಗಳೂರು : ನೆಹರೂ ಸ್ಥಾಪನೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನ್ಯಾಷ ನಲ್ ಹೆರಾಲ್ಡ್ ಪತ್ರಿಕೆಯನ್ನು ಬಿಜೆಪಿ ಸುಬ್ರಮಣ್ಯನ್ ಸ್ವಾಮಿಯ ಮೂಲಕ ಪ್ರಶ್ನಿಸುತ್ತಿದೆ. ಮುಂದೆ ಬಿಜೆಪಿಯನ್ನು ಸರ್ವನಾಶ ಮಾಡಲು ಸುಬ್ರಮಣ್ಯನ್ ಒಬ್ಬರೇ ಸಾಕು ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿ ದರು.

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ ಬರಗಾಲ ಇದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರಕಾರ ಪರಿಹಾರವನ್ನು ಹೆಚ್ಚು ನೀಡಬೇಕೆಂದು ಒತ್ತಾಯಿಸುವುದಿಲ್ಲ. ಪರಿಹಾರದ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಚೆನ್ನೈ ಸಂತ್ರಸ್ತರಿಗೆ ರಾಜ್ಯ ಸರಕಾರ ಕೊಟ್ಟ 5 ಕೋ.ರೂ. ಸಾಕಾಗು ವುದಿಲ್ಲ. ಚೆನ್ನೈ ಸಂತ್ರಸ್ತರಿಗೆ 10 ಕೋಟಿ ಪರಿಹಾರ ವನ್ನಾದರೂ ರಾಜ್ಯ ಸರಕಾರ ನೀಡ ಬೇಕು ಎಂದು ಅವರು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆ ಬಗ್ಗೆ ಬಿಜೆಪಿ ನಾಯಕರು ಪ್ರಧಾನಮಂತ್ರಿಯ ಗಮನಸೆಳೆಯಲಿ. ಪ್ರಕೃತಿ ವಿರುದ್ಧ ಹೋಗುತ್ತಿರುವ ಕರ್ನಾಟಕ ಸರಕಾರದ ವಿರುದ್ಧ ಮತ್ತು ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುವವರ ವಿರುದ್ಧ ಹೋರಾಟ ನಡೆಸಲಿ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹರಿಕೃಷ್ಣ ಬಂಟ್ವಾಳ್‌ಗೆ ಕಿಂಚಿತ್ತೂ ಬೆಂಬಲ ನೀಡುವುದಿಲ್ಲ ಎಂದು ಜನಾರ್ದನ ಪೂಜಾರಿ ಹೇಳಿದರು.

ಪಕ್ಷಕ್ಕೆ ತತ್ವ ಸಿದ್ಧಾಂತವಿದೆ. ಅದೇ ತತ್ವ ಸಿದ್ಧಾಂತದಲ್ಲಿ ಬಂದವನು ನಾನು. ನನ್ನ ಮಕ್ಕಳು ಪಕ್ಷಕ್ಕೆ ವಿರುದ್ಧ ನಿಂತರೆ ಒಪ್ಪುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡುವ ಮುನ್ನ ನನ್ನ ಅಭಿಪ್ರಾಯವನ್ನು ಪಕ್ಷಕ್ಕೆ ತಿಳಿಸಿದ್ದೇನೆ. ಹರಿಕೃಷ್ಣ ಬಂಟ್ವಾಳ್ ಪರ ಹೋರಾಟವನ್ನು ಮಾಡಿದ್ದೇನೆ. ಹರಿಕೃಷ್ಣ ಬಂಟ್ವಾಳ್ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದೇನೆ ಎಂದವರು ತಿಳಿಸಿದರು.

Leave a Reply