ಮಂಗಳೂರು: ಬಿಜೆಪಿಯಿಂದ ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ   ಧರಣಿ

ಮಂಗಳೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ದಿನಾಂಕ 09.11.2015 ಸೋಮವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹವನ್ನು ಮಂಗಳೂರಿನ ಪುರಭವನದ ಆವರಣದ ಒಳಗಡೆ ಇರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಂಗಳೂರು ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯ ಕಳೆದ ಒಂದು ತಿಂಗಳ ಅವಧಿಯಲ್ಲಿ ಏಳು ಜನರ ಭೀಕರ ಕೊಲೆ, ಹತ್ತಕ್ಕೂ ಹೆಚ್ಚು ಜನರ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಕಾನೂನು ಸುವ್ಯವಸ್ಥೆಗೆ ಬಹು ದೊಡ್ಡ ಸವಲಾಗುತ್ತಿರುವ ಇಂತಹ ವಾತಾವರಣದಿಂದ ಮಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಅಹಿತಕರ ಘಟನೆಗಳು ಮಂಗಳೂರು ನಗರದ ಸುತ್ತಮುತ್ತ ಹಾಗೂ ಸಂಪೂರ್ಣ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿ ಸಾರ್ವಜನಿಕರು ಭಯಪಡುವಂತಹ ವಾತಾವರಣ ನಿರ್ಮಾಣಗೊಂಡ ಪ್ರಯುಕ್ತ ಕರ್ನಾಟಕ ಸರಕಾರ ಮತ್ತು ಜಿಲ್ಲೆಯ ಮಂತ್ರಿವರ್ಯರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

Leave a Reply