ಮಂಗಳೂರು: ಬೀಚಿನಲ್ಲಿ ವಿವಾಹಿತ ವ್ಯಕ್ತಿಯ ಜೊತೆ ಅವಿವಾಹಿತ ಯುವತಿ ಸಾರ್ವಜನಿಕರಿಂದ ಧರ್ಮದೇಟು

ಮಂಗಳೂರು: ವಿವಾಹಿತ ವ್ಯಕ್ತಿಯು ಅವಿವಾಹಿತ ಯುವತಿಯ ಜೊತೆ ತಣ್ಣೀರು ಬಾವಿ ಬೀಚ್ ನಲ್ಲಿ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ.
ಕಾಟಿಪಳ್ಳದ ಫರ್ನೀಚರ್ ಅಂಗಡಿಯ ಮಾಲಿಕನಾದ ಈತ ಕಳೆದ ಒಂದು ವರ್ಷದ ಹಿಂದೆ ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಸುರತ್ಕಲ್ಲಿನ ಯುವತಿಯನ್ನು ಮನೆ ತಲುಪಿಸುವುದಾಗಿ ಹೇಳಿ ಬಸ್ಸು ಕಾಯುತ್ತಿದ್ದ ವೇಳೆ ಆಕೆಯನ್ನು ಕಾರಲ್ಲಿ ಕುಳ್ಳಿರಿಸಿ ಬೀಚ್ ಗೆ ಕರೆದೊಯ್ದಿದ್ದ.
ಅಲ್ಲಿ ಯವತಿಯನ್ನು ಪುಸಲಾಯಿಸಿ ಅಶ್ಲೀಲವಾಗಿ ವರ್ತಿಸಿದ್ದೆನ್ನಲಾಗಿದೆ, ಇದನ್ನು ಗಮನಿಸಿದ ಸ್ಥಳೀಯರು ವಿಭಿನ್ನ ಧರ್ಮದವರಿಗೆ ಸೇರಿದವರೆಂದು ವಿಚಾರಿಸಿದಾಗ, ಈತನು 57 ವರ್ಷಪ್ರಾಯ ಹೊದ್ದಿದ್ದ ವಿವಾಹಿತನೂ ಹಾಗೂ ಐದು ಮಕ್ಕಳ ತಂದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಸ್ಥಳೀಯರು ಧರ್ಮದೇಟು ನೀಡಿ ಇವರನ್ನು ಪೋಲೀಸರಿಗೆ ಒಪ್ಪಿಸಲಾಗಿದೆ, ಪೊಲೀಸರು ಇಬ್ಬರಿಗೂ ಮುಚ್ಚಳಿಕೆ ಬರೆಸಿ ಬಿಡುಗಡೆಗೊಳಿಸಿದ್ದಾರೆನ್ನಲಾಗಿದೆ

Leave a Reply