ಮಂಗಳೂರು: ಭಾರ ಎತ್ತುವ ಕ್ರೀಡೆ ಪುನರುಜ್ಜೀವನಗೊಳ್ಳ ಬೇಕು – ನಗರ ನಾರಾಯಣ ಶೆಣೈ

ಮಂಗಳೂರು: ಎಲ್ಲಾ ಕ್ರೀಡೆಗಳಂತೆ ಭಾರ ಎತ್ತುವ ಕ್ರೀಡೆಯು ಸಹ ಅತ್ಯಂತ ಜನಪ್ರಿಯ ಕ್ರೀಡೆ, ಅದರೆ ಇಂದು ಯುವಜನರು ಟಿ ವಿ ಮಾಧ್ಯಮ ಮತ್ತು ಅಂತರಜಾಲದ ಗುಂಗಿನಲ್ಲಿ ಇಂತಾಹ ಕ್ರೀಡೆಗಳ ಕಡೆ ಗಮನ ನೀಡುತ್ತಿಲ್ಲ.

1970-80 ರ ದಶಕದಲ್ಲಿ  ಅವಿಭಜಿತ ದ.ಕ.  ಜಿಲ್ಲೆಯಿಂದ ಈ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಬಾಚಿ ಕೊಂಡಿದ್ದರು. ಅದರೆ ಇಂದು ಈ ಕ್ರೀಡೆ ಜಿಲ್ಲೆಯಲ್ಲಿ ಅವಸಾನದತ್ತ ಸಾಗುತ್ತಿದೆ. ಅದ್ದರಿಂದ ಸರಕಾರ, ಜಿಲ್ಲಾಡಳಿತ ಕೂಡಲೇ ಭಾರ ಎತ್ತುವ ಕ್ರೀಡೆಯನ್ನು ಪುನರುಜ್ಜೀವನ ಗೊಳಿಸಲು ಮುಂದಾಗ ಬೇಕೆಂದು ದ.ಕ.ಜಿಲ್ಲಾ ವ್ಯೈಟ್ ಲಿಫ್ಟಿಂಗ್ ಅಸೋಸಿಯೇಷನ್ ಮಂಗಳೂರು ಇದರ ಸ್ಥಾಪಕ ಸದಸ್ಯರಾದ ನಗರ ನಾರಾಯಣ ಶೆಣೈ ತಿಳಿಸಿದ್ದಾರೆ.

04-karavali-utsava-weight-lifting-20160127-003

ಅವರು ಇಂದು ನಗರದ ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರ ಭಾರ ಎತ್ತುವ ಸ್ಫರ್ದೆಗಳನ್ನು ಉದ್ಘಾಟಿಸಿ ಮಾತನಾಡಿದರು.

1970 ರ ದಶಕದಲ್ಲಿ  ಎರಡು, ಮೂರು ರೂಪಾಯಿಗಳ ಟಿಕೇಟು ಪ್ರವೇಶ ದರ ಕೊಟ್ಟು ಭಾರ ಎತ್ತುವ ಸ್ಫರ್ಧೆಗಳನ್ನು ಸಾರ್ವಜನಿಕರು ನೋಡುತ್ತಿದ್ದ ನೆನಪನ್ನು ತಂದು ಕೊಂಡ ನಗರ ನಾರಾಯಣ ಶೆಣೈ ರವರು  ಇಂದು ಈ ಕ್ರೀಡೆಗೆ ಶೈಕ್ಷಣಿಕ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ಮಾತ್ರ ಮುಂದಿನ ಪೀಳಿಗೆಗೆ ಇದು ಉಳಿಯಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನು ಕಮಲಾಕ್ಷ ಅಮೀನ್ ವಹಿಸಿದ್ದರು. ಯುವಜನ ಸೇವಾ ಕ್ರೀಡಾ ಇಲಾಖೆಯ ತರಬೇತುದಾರರಾದ ಸರಸ್ವತಿ ಪುತ್ರನ್, ಪುಷ್ಪರಾಜ ಹೆಗಡೆ ಮುಂತಾದವರು ಭಾಗವಹಿಸಿದ್ದರು.

ಸರಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ

ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಬುಧವಾರ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಅಪರ ಜಿಲ್ಲಾಧಿಕಾರಿ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ನೌಕರರು ಸರಕಾರದಿಂದ ಹೆಚ್ಚಿನ ನಿರೀಕ್ಷೆಯಲ್ಲಿರುತ್ತಾರೆ. ಸರಕಾರಿ ವ್ಯವಸ್ಥೆ ದಕ್ಷವಾಗಿ, ಕ್ರಿಯಾಶೀಲತೆಯಿಂದ ಮುಂದುವರಿಯಲು ಅಧಿಕಾರಿಗಳ, ನೌಕರರ ಪಾತ್ರ ಅಪಾರ. ಸರಕಾರಿ ನೌಕರರ ಕಾರ್ಯದಕ್ಷತೆ ಹೆಚ್ಚಳಕ್ಕೆ ಮಾನಸಿಕ ಸ್ಥೈರ್ಯ ಮುಖ್ಯವಾಗಿದೆ. ಮಾನಸಿಕ ಸ್ಥೈರ್ಯ ಹೆಚ್ಚಳಕ್ಕೆ ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಸರಕಾರಿ ನೌಕರರ ಸಂಘಗಳು ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿ, ನೌಕರರ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ನೆರವಾಗುವಂತಹ ಯೋಜನೆ ರೂಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು, ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಸ್ವಾಗತಿಸಿದರು.

ಜ.28ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಾಂಸ್ಕøತಿಕ ಸ್ಪರ್ಧೆ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

Leave a Reply

Please enter your comment!
Please enter your name here