ಮಂಗಳೂರು: ಮತೀಯತೆ ಜಾತೀಯತೆ ಜನಚಳುವಳಿಗೆ ಮಾರಕ : ಮುನೀರ್ ಕಾಟಿಪಳ್ಳ

ಮಂಗಳೂರು: ಜಿಲ್ಲೆಯ ಆಡಳಿತ ಮಾಫಿಯಾಗಳ ನಿಯಂತ್ರಣದಲ್ಲಿದೆ. ಕೈಗಾರಿಕೆಗಳು ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ. ಅಕ್ರಮ ಮರಳುಗಾರಿಕೆ, ಜೂಜು ಕೇಂದ್ರಗಳು, ಬ್ಲೇಡ್ ಕಂಪೆನಿಗಳು ಬಡವರ ರಕ್ತ ಹೀರುತ್ತಿದೆ. ಇವುಗಳ ವಿರುದ್ಧ ಜನಪರ ಚಳುವಳಿಯನ್ನು ತೀವ್ರಗೊಳಿಸಲು ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷಗಳು ತೊಡಕಾಗುತ್ತಿದೆ ಎಂದು ಆಙಈI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಳವಳ ವ್ಯಕ್ತಪಡಿಸಿದರು. ಅವರು ನಗರದ ಬೋಳಾರದ ಂಏಉ ಭವನದಲ್ಲಿ ಆಙಈI ಮಂಗಳೂರು ನಗರ ಸಮಿತಿ ಹಮ್ಮಿಕೊಂಡಿದ್ದ ನಗರ ಮಟ್ಟದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

1

ಭಾರತದ ಸಂವಿಧಾನ ಜಗತ್ತಿನಲ್ಲೇ ಉನ್ನತವಾದ ಸ್ಥಾನವನ್ನು ಪಡೆದುಕೊಂಡಿದೆ. ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇಂದು ದೇಶದಲ್ಲಿ ಆಹಾರದ ಸ್ವಾತಂತ್ರ್ಯ ಮೇಲೆ ಧಾಳಿಗಳಾಗುತ್ತಿದೆ. ಸಮಾಜಕ್ಕೆ  ಮಾರ್ಗದರ್ಶಕರಾಗಿರುವ ಸಾಹಿತಿ ಬುದ್ಧಿಜೀವಿಗಳ ಕೊಲೆಗಳಾಗುತ್ತಿದ್ದರೂ ಸರಕಾರ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿದೆ ಎಂದರು.

ಎತ್ತಿನಹೊಳೆ ಯೋಜನೆ ವಿರುದ್ಧ ನಳಿನ್‍ಕುಮಾರ್ ಕಟೀಲ್‍ರ ಪಾದಯಾತ್ರೆಯನ್ನು ಟೀಕಿಸಿದ ಮುನೀರ್ ಕಾಟಿಪಳ್ಳ ಬಿ.ಜೆ.ಪಿ. ರಾಜ್ಯ ಘಟಕ ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲು ಒತ್ತಾಯಿಸಿದರು. ಚಿಕ್ಕಬಳ್ಳಾಪುರ ಕೋಲಾರದಲ್ಲಿ ಯೋಜನೆ ಪರವಾಗಿರುವ ಬಿಜೆಪಿ ಕರಾವಳಿಯಲ್ಲಿ ಪಾದಯಾತ್ರೆ ನಾಟಕದ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದರು. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದಾದರೆ ನಳಿನ್‍ಕುಮಾರ್ ಕಟೀಲ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹೋರಾಟ ನಡೆಸಲಿ ಎಂದು ಮುನೀರ್ ಕಾಟಿಪಳ್ಳ ಸವಾಲು ಹಾಕಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಿವೈಎಫ್‍ಐ ಜಿಲ್ಲಾಧ್ಯಕ್ಷ ನಗರಪಾಲಿಕೆ ಸದಸ್ಯರಾದ ದಯಾನಂದ ಶೆಟ್ಟಿ ಜಿಲ್ಲೆಯಲ್ಲಿ ಬಡತನ ತಾಂಡವವಾಡುತ್ತಿದೆ. ಆರೋಗ್ಯ ಮತ್ತು ಶಿಕ್ಷಣದ ವ್ಯವಸ್ಥೆ ವ್ಯಾಪಾರೀಕರಣಗೊಂಡಿದ್ದು ಬಡವರಿಗೆ ಆರೋಗ್ಯ ಮತ್ತು ಶಿಕ್ಷಣ ಮರೀಚೆಕೆಯಾಗುತ್ತಿದೆ ಎಂದು ಜಿಲ್ಲೆಯ ಪ್ರಬಲ ಯುವಜನ ಚಳುವಳಿ ಕಟ್ಟಬೇಕಾಗಿದೆ ಎಂದರು.

ಆಙಈI ಮಂಗಳೂರು ನಗರ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ಅಧ್ಯಕ್ಷತೆ ವಹಿಸಿದ್ದರು. ನಗರ ಪ್ರಮುಖರಾದ  ನವೀನ್ ಕೊಂಚಾಡಿ, ಮನೋಜ್ ಉರ್ವಸ್ಟೋರ್, ಪ್ರಮೀಳಾ ಶಕ್ತಿನಗರ, ಸಂತೋಷ್ ನೀತಿನಗರ ಉಪಸ್ಥಿತರಿದ್ದರು.

ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರೆ ನಗರ ಕೋಶಾಧಿಕಾರಿ ಮೊಹಮ್ಮದ್ ಸಾದಿಕ್ ಕಣ್ಣೂರು ವಂದಿಸಿದರು.

ನಂತರ ನಗರಮಟ್ಟದ ಯುವಜನ ಅಧಿವೇಶನ ಆರಂಭವಾಯಿತು. ನಗರದ ವಿವಿಧ ಘಟಕಗಳಿಂದ ಆಯ್ಕೆಯಾದ 100 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Please enter your comment!
Please enter your name here