ಮಂಗಳೂರು: ಮನೆಯಲ್ಲಿ ದಾಸ್ತಾನಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

Spread the love

ಮಂಗಳೂರು: ಜಲ್ಲಿಗುಡ್ಡೆಯ ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಸಿಬ್ಬಂದಿ ಆರೋಪಿಗಳಿಂದ 800 ಗ್ರಾಂ. ಗಾಂಜಾ ಸೇರಿದಂತೆ 50 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಬಕಾರಿ ಇಲಾಖೆಯ ಸಿಬಂದಿಗಳು ಜಲ್ಲಿಗುಡ್ಡೆಯಲ್ಲಿ ಶನಿವಾರಿ ಬಂಧಿಸಿ ಆರೋಪಿಗಳಿಂದ 800 ಗ್ರಾಂ. ಗಾಂಜಾ ಸೇರಿದಂತೆ 50 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಜಲ್ಲಿಗುಡ್ಡೆಯ ಚಂದು ಯಾನೆ ವೆಂಕಟೇಶ್, ನೌಫಲ್, ಪಡೀಲ್‌ನ ಅವಿನಾಶ್ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮನೆಯಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಧಾಳಿ ನಡೆಸಿ 50 ಗ್ರಾಂ.ನ 10 ಪ್ಯಾಕೆಟ್, 200 ಗ್ರಾಂ.ನ ಒಂದು ಪ್ಯಾಕೆಟ್ ಮತ್ತು 50 ಗ್ರಾಂ.ಗಳ 20 ಪ್ಯಾಕೆಟ್‌ಗಳನ್ನು ಇಲೆಕ್ಟ್ರಾನಿಕ್ ತಕ್ಕಡಿಯೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಬಕಾರಿ ಡಿ.ಸಿ. ಎಲ್. ಎ. ಮಂಜುನಾಥ್ ನಿರ್ದೇಶನದಂತೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ಆಶಾಲತಾ ಮಾರ್ಗದರ್ಶನಲ್ಲಿ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್ ಕುದ್ರೋಳಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.


Spread the love