ಮಂಗಳೂರು: ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಪರಿಹಾರ ಧನ ಬಿಡುಗಡೆ

ಮಂಗಳೂರು: ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 9 ಮಂದಿ ಅರ್ಜಿದಾರರಿಗೆ ರೂ.ಐದು ಲಕ್ಷದ ಮೂವತೈದು ಸಾವಿರ   (ರೂ.5,35,000/-)   ಪರಿಹಾರ ಧನ ಬಿಡುಗಡೆ.

ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 9 ಮಂದಿ ಅರ್ಜಿದಾರರಿಗೆ ಒಟ್ಟು ರೂ.5,35,000/- ಪರಿಹಾರ ಧನ ಬಿಡುಗಡೆಗೊಳಿಸಿದರು.

ಶ್ರೀ ಸಂತೋಷ್ ಕಾವೂರು ಇವರಿಗೆ ರೂ.40,000/-, ಶ್ರೀಮತಿ ಶಾರದ ಬಜಾಲ್ ಇವರಿಗೆ ರೂ.40,000/-, ಶ್ರೀ ಫೆಲಿಕ್ಸ್ ವೇಗಸ್ ರೂ.50,000/-, ಶ್ರೀ ರಿಶಬ್ ರಾಜ್ ಕಣ್ಣೂರು ಇವರಿಗೆ ರೂ.60,000/-, ಶ್ರೀಮತಿ ಐಸಮ್ಮ ಪೆರ್ಮನ್ನೂರು ಇವರಿಗೆ 60,000/- ಶ್ರೀ ಸಂತೋಷ್ ಕುಮಾರ್ ಬೋಳೂರು ಇವರಿಗೆ ರೂ.60,000/-, ಶ್ರೀ ಆನಂದ ಸುಳ್ಯ ಇವರಿಗೆ ರೂ.75,000/-. ಶ್ರೀಮತಿ ಗೌರಿ ಮುಂಡ್ಕೂರು ಇವರಿಗೆ ರೂ. 1.00ಲಕ್ಷ,      ಶ್ರೀ ನವೀನ್ ಶಿವಮೊಗ್ಗ ಇವರಿಗೆ ರೂ.50,000/-

Leave a Reply

Please enter your comment!
Please enter your name here