ಮಂಗಳೂರು: ಯುವತಿಯರಿಗೆ ತನ್ನ ಬೆತ್ತಲೆ ಪ್ರದರ್ಶನ- ಸಾರ್ವಜನಿಕರಿಂದ ಗೂಸಾ ತಿಂದ ರಿಕ್ಷಾ ಚಾಲಕ

 ಮಂಗಳೂರು: ತನ್ನ ಹುಟ್ಟುಡುಗೆಯನ್ನು ಪ್ರದರ್ಶಿಸಿ ಹಾಸ್ಟೆಲ್ ಯುವತಿಯರಿಗೆ ತೊಂದರೆ ನೀಡುತ್ತಿದ್ದ ರಿಕ್ಷಾ ಚಾಲಕನೋರ್ವನನ್ನು ಸಾರ್ವಜನಿಕರು ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಮಲ್ಲಿಕಟ್ಟೆಯಲ್ಲಿ ಗುರುವಾರ ಜರುಗಿದೆ.

mangalorean-003 mangalorean-002

 

ಯುವತಿಯರಿಗೆ ತೊಂದರೆ ನೀಡುತ್ತಿದ್ದ ರಿಕ್ಷಾ ಚಾಲಕನನ್ನು ಬೊಳಾರ ನಿವಾಸಿ ಯೋಗಿ ಯಾನೆ ರಾಮದಾಸ್ ಕಿಣಿ ಎನ್ನಲಾಗಿದೆ. ಹಾಸ್ಟೆಲ್ ಹುಡುಗಿಯರು ಹೇಳುವ ಪ್ರಕಾರ ಈತ ಪ್ರತಿ ದಿನ ರಾತ್ರಿ ಹೊತ್ತು ಹಾಸ್ಟೆಲ್ ಪರಿಸರದಲ್ಲಿ ಕಳೆದ ಎರಡು ತಿಂಗಳಿನಿಂದ ರಿಕ್ಷಾದಲ್ಲಿ ಬಂದು ತನ್ನ ಬಟ್ಟೆಗಳನ್ನು ಕಳಚಿ ವಿಕೃತ ಮನೋಭಾವವನ್ನು ಪ್ರದರ್ಶನ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ತೊಂದರೆ ಪಡುತ್ತಿದ್ದ ವಿದ್ಯಾರ್ಥಿನಿಯರು ಈ ಬಗ್ಗೆ ಪೋಲಿಸರಿಗೆ ತಿಳಿಸಿದರೂ ಅವರು ದಾಖಲೆ ಹಾಗೂ ಆತನ ರಿಕ್ಷಾದ ಸಂಖ್ಯೆಯನ್ನು ಕೇಳಿದ್ದರು ರಾತ್ರಿಯ ಹೊತ್ತಿನಲ್ಲಿ ಆತ ಬರುವುದರಿಂದ ರಿಕ್ಷಾ ನೊಂದಣಿ ಸಂಖ್ಯೆ ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಈ ಕುರಿತು ಮಾಧ್ಯಮ ವ್ಯಕ್ತಿಗಳಿಗೆ ಮಾಹಿತಿ ನೀಡಿದ್ದು ಅದಕ್ಕೆ ಸರಿಯಾಗಿ ಗುರುವಾರ ಮಧ್ಯಾಹ್ನ ತನ್ನ ವಿಕೃತಿಯನ್ನು ಆರಂಭಿಸಿದ್ದ, ಇದರಿಂದ ಜಾಗೃತಗೊಂಡ ಸ್ಥಳೀಯರು ಈತನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ಬಳಿಕ ಆಗಮಿಸಿದ ಕದ್ರಿ ಪೋಲಿಸರು ಆತನನ್ನು ಬಂಧಿಸಿದ್ದಾರೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here