ಮಂಗಳೂರು: ರಾಜ್ಯಕ್ಕೆ ಮಾದರಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ 1077 ಟೋಲ್ ಫ್ರಿ !

Spread the love

ಮಂಗಳೂರು: ಸಾರ್ವಜನಿಕರ ಸಮಸ್ಯೆಗೆ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎನ್ನುವುದನ್ನು ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ನಾನಾ ಸತ್ಯಗಳು ಹೊರಬಂತು. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಟೋಲ್ ಫ್ರಿ ಸಂಖ್ಯೆ 1077 ಬೇಕಾಬಿಟ್ಟಿ ಮಲಗುತ್ತಿದೆ ಎನ್ನುವ ಆರೋಪಗಳನ್ನು  ಬೆನ್ನುಹಟ್ಟಿಕೊಂಡು ಮುಂದೆ ಸಾಗಿದಾಗ ಇವೆಲ್ಲವೂ ನೂರಕ್ಕೆ ನೂರರಷ್ಟ ಸತ್ಯ ಎನ್ನುವ ವಿಚಾರಗಳು ದೃಢಪಡುತ್ತಿದ್ದಂತೆಯೇ ಅಧಿಕಾರಿಗಳಾದ ADC ಕುಮಾರ್ ಅವರು  ಈಗ ಎಚ್ಚರಗೊಂಡು ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಮಾಹಿತಿ ಇದೆ.

ಇವರ ಕ್ರಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಟೋಲ್ ಫ್ರಿ ಸಂಖ್ಯೆ 1077 ಇಡೀ ರಾಜ್ಯಕ್ಕೆ ಮಾದರಿಯಾಗುವತ್ತಾ ದಾಪುಗಾಲು ಇಡುತ್ತಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವ ಜತೆಯಲ್ಲಿ ಅಧಿಕಾರಿಗಳು  ಸಮಸ್ಯೆಗಳ ಕುರಿತು ಏನೂ ಹೇಳುತ್ತಾರೆ ಎನ್ನುವುದನ್ನು ಟೋಲ್‌ಫ್ರಿಗೆ ಕರೆ ಮಾಡುವವರಿಗೆ ಮಾಹಿತಿ ಲಭ್ಯವಾಗುತ್ತಿದೆ. ದಿನದ 24 ಗಂಟೆನೂ ಈ ಸೇವೆಯನ್ನು  ಜಿಲ್ಲಾಡಳಿತ ಸ್ವಂಧನೆ ಮಾಡುವುದು ಅದರ ಕರ್ತವ್ಯ. ಸರಿಯಾದ ರೀತಿಯಲ್ಲಿ ಇದರ ಕಾರ‍್ಯ ನಿರ್ವ್ಹಣೆ ನಡೆಯುತ್ತಿಲ್ಲ ಎನ್ನುವ ಸಾರ್ವನಿಕರ  ಮಾತಿಗೆ ಎಡಿಸಿ ಕುಮಾರ್ ಅವರು ಖಡಕ್ ಕ್ರಮಗಳನ್ನು  ಕೈಗೊಡರೆ ಈ ಮೂಲಕ ಎಲ್ಲರಿಗೂ ಮಾದರಿಯಾಗ ಬಹುದು

ಟೋಲ್ ಫ್ರಿ ಚುನಾವಣೆ ಮತ್ತು ತುರ್ತು ಸಂಧರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತಿತ್ತು..ಈಗ ನಿಜವಾದ ಕಾಳಜಿ ತೋರಿಸುತ್ತಿದೆ.

ಬರೋಬರಿ ಎರಡು ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಹರ್ಷಾ ಗುಪ್ತ ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಾಗ ವಿಧಾನ ಸಭೆ ಚುನಾವಣೆ ನಿಗದಿಯಾಗಿತ್ತು. ಈ ಸಮಯದಲ್ಲಿ ಈ ಟೋಲ್‌ಫ್ರಿ ,1077 ಸಂಖ್ಯೆಯನ್ನು ಬಳಕೆ ಮಾಡಲಾಗಿತ್ತು. ಅಲ್ಲಿಯವರೆಗೂ ತುರ್ತು ಸಮಯದಲ್ಲಿ ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಳಕೆಯಾಗುತ್ತಿತ್ತು. ಆದರೆ ಇದು  ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಬಳಕೆಯಾಗುತ್ತಿರಲಿಲ್ಲ. ಇದರ ಪ್ರಯೋಜನ  ಸಾರ್ವಜನಿಕರಿಗೆ ಗೊತ್ತಿದೆಯೋ ಇಲ್ಲವೋ  ಎನ್ನುವ ಗೊಂದಲದ ಜತೆಗೆ ಟೋಲ್‌ಫ್ರಿಯನ್ನು  ಸರಿಯಾಗಿ ಮುನ್ನಡೆಸುವ ಕೆಲಸ ನಡೆಯುತ್ತಿರಲಿಲ್ಲ.  ಇದು ಸರಿಯಾಗಿ ಕಾರ್ಯ ನಿರ್ವಹಿಸಿದರೆ   ಇದರಿಂದ ದೂರದ ಊರಿಂದ ಮಾನ್ಯ  ಜಿಲ್ಲಾಧಿಕಾರಿ ಅಥಾವ ಇತರ ಅಧಿಕಾರಿಗಳನ್ನು ಕಾಣಲು ಬರುವ ಸಾರ್ವಜನಿಕರಿಗೆ ಸಮಯ ಮತ್ತು ಹಣ ಉಳಿತಯವಾಗಲಿದೆ.

ಪದೇ ಪದೇ ಗಮನ ಸೆಳೆದ ಸಂಖ್ಯೆ:

ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಅವರ ಮುಂದೆ ಇಡುವ ಕೆಲಸವನ್ನು ಈ ಟೋಲ್ ಫ್ರಿ ಸಂಖ್ಯೆಗಳು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಜಿಲ್ಲೆಯಲ್ಲಿ ಯಾವುದೇ ಸಮಯದಲ್ಲಿ ಏನೇ ನಡೆದರೂ ಇದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕಾದರೆ ಸಂಖ್ಯೆ 1077ಗೆ ಕರೆ ಮಾಡಿದ ಕೂಡಲೇ ಸಮಸ್ಯೆಯನ್ನು ಕೇಳಿ ದೂರನ್ನು ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡುವ ಗುರುತರ ಜವಾಬ್ದಾರಿ ಈ ಸಂಖ್ಯೆಯ ಹೊಣೆ ಹೊತ್ತವರಿಗೆ ಇದೆ. ಸದಾ ಕಾಲ ಜಿಲ್ಲೆಯ ಅಭಿವೃದ್ಧಿ ಕಾರ‍್ಯಗಳ ಸಭೆ, ಸಮಾರಂಭಗಳಲ್ಲಿ ಬ್ಯುಸಿ ಇರುವ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅವರಿಗೆ ಮನವಿ, ಸಮಸ್ಯೆಗಳಿಗೆ ಈ ಟೋಲ್ ಫ್ರಿ ಸಂಖ್ಯೆ ಕಷ್ಟದಲ್ಲಿ ಇರುವ ಮಂದಿಗೆ ವರದಾನ ವಾಗೋದರಲ್ಲಿ ಸಂದೇಹ ಇಲ್ಲ.

ಯಾವ ರೀತಿಯ ದೂರನ್ನು ಸಲ್ಲಿಸಬಹುದು

ದ.ಕ ಪೇಪರ್ ಲೆಸ್ ಆಗಿರುದರಿಂದ ಯಾವುದೇ ಅರ್ಜಿಯು ಕಂಪ್ಯೊಟರ್ ಸಂಖೆ ಹೊಂದಿರುತ್ತಾನೆ .. ಅರ್ಜಿದಾರನು ತನ್ನ ಅರ್ಜಿ ಸ್ಟೇಟಸ್ ಕಂಪ್ಯೊಟರ್ ಸಂಖೆ ಹೇಳಿದರೆ ಯಾವ ಹಂತದಲ್ಲಿ ಇದೆ ಗೊತ್ತಾಗುತ್ತದೆ.

ಜಿಲ್ಲಾಧಿಕಾರಿಗಳು ಯಾವ ಸಂದರ್ಭಗಳಲ್ಲಿ ಸಿಗುತ್ತಾರೆ. ? ಮೂಲಭೂತ ಸೌಕರ್ಯ ನಿರಾಕರಿಸುವ ಪ್ರಕರಣ, ಲಂಚ ಪ್ರಕರಣ ದೂರು, ಬ್ರೋಕರ್ ಗಳ ಹಾವಳಿ ತಪ್ಪಿಸಲು ನೆರವಾಗಲಿದೆ.

‘ಟೋಲ್ ಫ್ರಿ ಸಂಖ್ಯೆ ದಿನದ 24 ಗಂಟೆನೂ ಕಾರ‍್ಯ ನಿರ್ವಹಣೆ ಮಾಡಬೇಕು. ಅದಕ್ಕಾಗಿ ಹಗಲು ಹಾಗೂ ರಾತ್ರಿ ಎನ್ನುವ ಎರಡು ಪಾಳಿಯಲ್ಲಿ ಕೆಲಸ ಮಾಡುವವರು ಇದ್ದಾರೆ. ಜಿಲ್ಲೆಯ ತುರ್ತು ಸಮಯದಲ್ಲಿ ಬಳಕೆಯಾಗುವ ಈ ಟೋಲ್ ಫ್ರಿ ಸಂಖ್ಯೆಯನ್ನು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಕೆ ಮಾಡಬಹುದು. ಜತೆಗೆ ಈಗಾಗಲೇ ಟೋಲ್ ಫ್ರಿ 1077ಗೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕುರಿತು ಯೋಜನೆಗಳು ಸಿದ್ಧವಾಗಿದೆಯಂತೆ.

ಟೋಲ್ ಫ್ರಿ ಸಂಖ್ಯೆಯ ಉಸ್ತುವಾರಿ ಯಾರು?

ಸಾರ್ವಜನಿಕರ ಸಮಸ್ಯೆಯನ್ನು ಕೇಳುವ ಹಾಗೂ ಪರಿಹಾರ ಕೊಡುವ ಕೆಲಸ ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಜಿಲ್ಲಾಧಿಕಾರಿಯಿಂದ ನಡೆಯುತ್ತದೆ. ಬಹಳ ಹಿಂದಿನಿಂದಲೂ ಈ ಟೋಲ್ ಫ್ರಿ ಬಳಕೆ ಎಲ್ಲ ಜಿಲ್ಲೆಯಲ್ಲೂ ನಡೆಯುತ್ತಿದೆ. ಡೀಸಿ ಕಚೇರಿಯಲ್ಲಿ ಇದರ ಕಾರ‍್ಯ ನಿರ್ವಹಣೆ ನಡೆಯುತ್ತದೆ. ಇದರ ಕಾರ‍್ಯ ವೈಖರಿಯನ್ನು ಸಿಸಿ ಕ್ಯಾಮೆರಾದ ಮೂಲಕ ದಾಖಲಿಸುವ ಕೆಲಸ ಕೂಡ ನಡೆಯುತ್ತಿದೆ. ಇದರ ಜತೆಗೆ ಇದರ ಉಸ್ತುವಾರಿಯನ್ನು ತಹಸೀಲ್ದಾರ್ ಗ್ರೇಡ್‌ನವರನ್ನು ನೇಮಕ ಮಾಡಲಾಗುತ್ತದೆ. ಅವರ ಕೆಳಗೆ ಅಧಿಕಾರಿಗಳಿರುತ್ತಾರೆ. ಅವರು ಕರೆ ಸ್ವೀಕರಿಸಿ ದೂರುಗಳನ್ನು ಪಡೆದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವ ಕೆಲಸ ನಡೆಯುತ್ತದೆ. ಇದು ಸರಿಯಾಗಿ ಕೆಲಸ ನಿರ್ವಹಿಸಿದರೆ ಎಲ್ಲಾ ಇಲಾಖೆಗೆ ಜಿಲ್ಲಾಡಳಿತ ಸಂಪರ್ಕ ಕೊಂಡಿಯಾಗುದಲ್ಲಿ ಅನುಮಾನಗಳಿಲ್ಲ..

ಒಂದು ವೇಳೆ  ದೂರು ದಾಖಲಿಸಲು ನಿರಾಕರಿಸಿದರೆ ನೇರ ಅಪರ ಜಿಲ್ಲಾಧಿಕಾರಿ ಕುಮಾರ್ ಅವರ ಗಮನಕ್ಕೆ ತರುವ ವ‍್ಯವಸ್ಥೆಯಾಗ ಬೇಕು

ADC :-KUMAR ,             9480267013
DC.    :A.B IBRAHIM.     9449225000

ಖಾಸಗಿ ಕಂಪೆನಿಗಳು ಚೆನ್ನಾಗಿ ಸೇವೆ ನೀಡುತ್ತಿರುವ ಕಾಲದಲ್ಲಿ ನಮ್ಮ ಜಿಲ್ಲಾಢಳಿತವು ಇನ್ನೂ ಚೆನ್ನಾಗಿ ಕಾರ್ಯ ನಿರ್ವಹಣೆ ಮಾಡಲು.   ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಾರ್ವಜನಿರು  ಒತ್ತಾಯಿಸಬಹುದು …


Spread the love