ಮಂಗಳೂರು:  ರಿಕ್ಷಾದಲ್ಲಿ ನೇಣು ಬಿಗಿದು ಆತ್ಮಹತ್ಯೆ, ಕೊಲೆ ಶಂಕೆ

ಮಂಗಳೂರು: ವಾಮಂಜೂರಿನಲ್ಲಿ ಆಟೋ ಚಾಲಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಆಟೋದಲ್ಲಿ ಶುಕ್ರವಾರ ಪತ್ತೆಯಾಗಿದೆ.

ಮೃತಪಟ್ಟ ಆಟೋ ಚಾಲಕನನ್ನು ಸುಲ್ತಾನ್ ಬತ್ತೇರಿಯಾ ನಿವಾಸಿ ಸುರೇಶ್ (28) ಎಂದು ಗುರುತಿಸಲಾಗಿದೆ.

ವಾಮಂಜೂರಿನ ಮಂಗಳಜ್ಯೋತಿ ಶಾಲೆಯ ಮುಂಭಾಗದಲ್ಲಿ ಗುರುವಾರ ರಾತ್ರಿಯಿಂದ ಈ ಆಟೋ ನಿಲ್ಲಿಸಲಾಗಿದ್ದು, ಆಟೋ ಮೇಲ್ಭಾಗದ ಕಬ್ಬಿಣದ ರಾಡ್‌ಗೆ ನೈಲಾನ್ ಹಗ್ಗ ಕಟ್ಟಲಾಗಿದ್ದು, ಸುರೇಶ್ ಕಾಲುಗಳು ನೆಲಕ್ಕೆ ತಾಗುವ ರೀತಿಯಲ್ಲಿ ಶವ ಪತ್ತೆಯಾಗಿದೆ. ಶುಕ್ರವಾರ ಮುಂಜಾನೆ ಆಟೋದಲ್ಲಿ ಶವವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಸುರೇಶ್ ಅವರನ್ನು ಕೊಲೆ ಮಾಡಿ ಶವವನ್ನು ನೇತುಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಟೋದಲ್ಲಿ ಪತ್ರವೊಂದು ಸಿಕ್ಕಿದ್ದು ಅದರಲ್ಲಿ 2 ಮೊಬೈಲ್ ಸಂಖ್ಯೆಗಳನ್ನು ಬರೆಯಲಾಗಿದೆ. ಒಂದು ನಂಬರ್ ಸುರೇಶ್ ಅವರ ಪತ್ನಿಯದ್ದಾಗಿದ್ದು, ಮತ್ತೊಂದು ಕುಟುಂಬ ಸದಸ್ಯರಿಗೆ ಸೇರಿದ್ದಾಗಿದೆ.

ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Please enter your comment!
Please enter your name here