ಮಂಗಳೂರು: ವಾಶರ್ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 464 ಗ್ರಾಂ ತೂಕದ ಚಿನ್ನವನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ. 12,20,320 ರೂ. ಮೌಲ್ಯದ ಚಿನ್ನವನ್ನು ಸ್ಟ್ರೋಲರ್ ಬ್ಯಾಗ್‌ನ ಒಳಭಾಗದ ಲೈನಿಂಗ್‌ನಲ್ಲಿ ವಾಶರ್ ಮಾದರಿಯಲ್ಲಿ ಅಡಗಿಸಿಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿತ್ತು. ಏರ್‌ಇಂಡಿಯಾ ವಿಮಾನದಲ್ಲಿ ಅಬುದಾಬಿಯಿಂದ ಮಂಗಳೂರಿಗೆ ಆಗಮಿಸಿದ ಕಾಸರಗೋಡು ಕುಂಬಳೆಯ ಮೊಗ್ರಾಲ್ ನಿವಾಸಿ ಮೊಹಮ್ಮದ್ ಮೊಗ್ರಾಲ್ ಎಂಬಾತನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply