ಮಂಗಳೂರು: ವಿವಿಧ ಕಾರ್ಯಕ್ರಮಗಳ ಪ್ರಕಟಣೆಗಳು

Spread the love

ನವೆಂಬರ್ ಮಾಹೆ ಉದರದರ್ಶಕ ಶಸ್ತ್ರಚಿಕಿತ್ಸಾ ಶಿಬಿರಗಳು

 0ಗಳೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನವೆಂಬರ್ ಮಾಹೆಯಲ್ಲಿ ವಿವಿಧ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉದರದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ವನ್ನು ಏರ್ಪಡಿಸಲಾಗಿದೆ. ನವೆಂಬರ್ 7 ರಂದು ಸಾರ್ವಜನಿಕ ಆಸ್ಪತ್ರೆ ಪುತ್ತೂರು, 13 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, 17 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, 20 ರಂದು ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಸಾರ್ವಜನಿಕ ಆಸ್ಪತ್ರೆ ಪುತ್ತೂರು , 21 ರಂದು ತಾಲೂಕು ಆಸ್ಪತ್ರೆ ಸುಳ್ಯ , 24 ರಂದು ಸ.ಆ. ಕೇಂದ್ರ ಮೂಡಬಿದ್ರೆ, 27 ರಂದು ಸರ್ಕಾರಿ ಆರೋಗ್ಯ ಕೇಂದ್ರ ಉಪ್ಪಿನಂಗಡಿ ಆರೋಗ್ಯ ಕೇಂದ್ರಗಳಲ್ಲಿ ಉದರದರ್ಶಕ ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಲಿದೆ. ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.

ನವೆಂಬರ್ 10 ರಂದು ಟಿಪ್ಪುಸುಲ್ತಾನ್ ಜನ್ಮದಿನಾಚರಣೆ

0ಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದ.ಕ. ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 10 ರಂದು ಬೆ.10-00ಗಂಟೆಗೆ ದ.ಕಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಟಿಪ್ಪುಸುಲ್ತಾನ್ ಅವರ ಜನ್ಮದಿನಾಚರಣೆಯನ್ನು  ಹಮ್ಮಿಕೊಳ್ಳಲಾಗಿದೆ.

ಸಮಾರಂಭವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವರಾದ ಯು.ಟಿ.ಖಾದರ್, ಯುಜನಸೇವೆ ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವರಾದ ಕೆ.ಅಭಯಚಂದ್ರ ಜೈನ್ ಅವರು ಉಪಸ್ಥಿತರಿರುತ್ತಾರೆ. ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ ಭಾವಚಿತ್ರ ಅನಾವರಣಗೊಳಿಸುವರು. ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಅವರು ವಹಿಸಲಿದ್ದಾರೆ.

 ರೈಲ್ವೆ ಪ್ರಯಾಣಿಕರ ಕುಂದುಕೊರತೆ ಸಭೆ

0ಗಳೂರು : ರೈಲ್ವೆ ಪ್ರಯಾಣಿಕರ ಕುಂದುಕೊರತೆ, ರೈಲ್ವೆ ಅಭಿವೃದ್ಧಿ ಮುಂತಾದ ವಿಷಯಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ನ.7 ರಂದು ಬೆ.11 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸಭೆ ಏರ್ಪಡಿಸಿದ್ದಾರೆ. ಪ್ರಕಟಣೆ ತಿಳಿಸಿದೆ.

ಹರ್ಷ ವಾರದ ಅತಿಥಿ: ಟಿ. ಸತೀಶ್ ಪೈ

ಮಂಗಳೂರು: ಆಕಾಶವಾಣಿಯ ಹರ್ಷವಾರದ ಅತಿಥಿಯ 210ನೇ ಕಾರ್ಯಕ್ರಮದಲ್ಲಿ ನವೆಂಬರ್ 8ರಂದು ಬೆಳಿಗ್ಗೆ 8.50 ಕ್ಕೆ ಮಣಿಪಾಲದ ಶ್ರೀ ಟಿ.ಸತೀಶ್ ಪೈ ಭಾಗವಹಿಸಲಿದ್ದಾರೆ.

ಮಣಿಪಾಲ ಪ್ರೆಸ್‍ನ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಮುದ್ರಣ ಸಂಸ್ಥೆ ಎಂಬ ಹೆಸರು ಪಡೆದಿದೆ. 2000ಕ್ಕೂ ಹೆಚ್ಚು ಉದ್ಯೋಗ ಕಲ್ಪಿಸಿದ ಈ ಸಂಸ್ಥೆ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಆಧಾರ್ ಕಾರ್ಡ್ ಮುದ್ರಣ ಮಾಡುತ್ತಿದೆ. ಈ ಮುದ್ರಣ ಸಂಸ್ಥೆ ಮಾರುಕಟ್ಟೆಯ ಶೇ.55 ರಷ್ಟು ಪ್ರಿಪೆಯ್ಡ್ ಟೆಲಿಫೋನ್ ಕಾರ್ಡ್‍ಗಳನ್ನು ಪ್ರವಾಸಿ ಮ್ಯಾಗಜಿನ್, ಮುದ್ರಣದಲ್ಲಿ ಟೆಲಿಫೋನ್ ಕಾರ್ಡ್‍ಗಳನ್ನು , ಪ್ರವಾಸಿ ಮ್ಯಾಗಜಿನ್, ಮುದ್ರಣದಲ್ಲಿ ನಿರತವಾಗಿದೆ. ಮಣಿಪಾಲ ಮೀಡಿಯಾ ನೆಟ್‍ವರ್ಕ್‍ನ ಆಡಳಿತ ನಿರ್ದೇಶಕರಾದ ಇವರು ಉದಯವಾಣಿ, ತರಂಗ, ತುಂತುರು, ರೂಪತಾರಾ ಮುಂತಾದ ಪ್ರಕಟನೆಗಳ ವ್ಯವಸ್ಥಾಪಕ ಸಂಪಾದಕರು. ಇವರು ತಮ್ಮ ಜೀವನದ ಸಾಧನೆಯ ಪುಟಗಳನ್ನು ಸಂದರ್ಶನದಲ್ಲಿ ತೆರೆದಿದ್ದಾರೆ.

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅಥಿತಿಯಾಗಿ ಸಾಹಿತಿ ಎಚ್ ಡುಂಡಿರಾಜ್ ಭಾಗವಹಿಸಲಿದ್ದಾರೆ.

 


Spread the love