ಮಂಗಳೂರು: ವಿವಿಧ ಹಿಂದೂ ಸಂಘಟನೆಗಳಿಂದ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವುದರ ವಿರುದ್ಧ ಪ್ರತಿಭಟನೆ

ಮಂಗಳೂರು: ಈ ಪ್ರತಿಭಟನೆಯಲ್ಲಿ ಶ್ರೀ.ರಾಮಸೇನೆ, ಹಿಂದೂ ಮಹಾಸಭಾ, ಅಖಿಲ ಭಾರತ ವಿಧ್ಯಾರ್ಥಿ ಪರಿಷತ್, ಹಿಂದೂ ಯವ ಸೇನೆ, ಶ್ರೀ.ಪತಂಜಲಿಯ , ಹಿಂದೂ ಜಾಗರಣ ವೇದಿಕೆ ಮತ್ತು  ಭಜನಾ ಮಂಡಳಿಯ ಸದಸ್ಯರು, ಮೂಡಬಿದ್ರೆ ಕರಿಂಜೆ ಮಠದ ಶ್ರಿ.ಶ್ರೀ. ಮುಕ್ತಾನಂದ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಯುವ ಸೇನೆಯ ಜಿಲ್ಲಾಧ್ಯಕ್ಷರಾದ  ಶ್ರೀ ವೀರಪ್ಪ ಮೂಡುಶೆಡ್ಡೆ ಇವರು ಮಾತನಾಡುತ್ತಾ ಹಿಂದೂ ರಾಷ್ಟ್ರದಲ್ಲಿದ್ದು ಹಿಂದೂಗಳು ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಬಂದಿರುವದು ಅತ್ಯಂತ ನಾಚಿಕೆಗೇಡಿನ ಸಂಗತಿ. ಧರ್ಮಜಾಗೃತಿಯ ಕಾರ್ಯ ಮಾಡುವ ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪ ಮಾಡುವದು ಅತ್ಯಂತ ಖಂಡನೀಯ ಎಂದು ಹೆಳಿದರು.

1-srs-protest 2-srs-protest-001

ಪ್ರತಿಭಟನೆಯಲ್ಲಿ ಶ್ರಿ.ಶ್ರೀ. ಮುಕ್ತಾನಂದ ಸ್ವಾಮೀಜಿಯವರು ಮಾತನಾಡಿ  ಸೀತೆಯನ್ನು ನೋಡಲು ಹನುಂತನು ಲಂಕೆಗೆ ಬೇಟಿ ನೀಡಿದಾಗ ಅವನ ಬಾಲಕ್ಕೆ ಬಟ್ಟೆ ಸುತ್ತಿ ಎಣ್ಣೆ ಹಾಕಿ ಬೆಂಕಿ ಕೊಟ್ಟು ಕೊಲ್ಲಲು ಪ್ರಯತ್ನಿಸಿದರು ಆದರೆ ಹನುಮಂತ ಇಡೀ ಲಂಕೆಯನ್ನೇ ಭಸ್ಮ ಮಾಡಿದ ಹಾಗೆಯೇ ನಮ್ಮ ದೇಶಕ್ಕೆ ಸಾಧಕರನ್ನು ನಿರ್ಮಾಣ ಮಾಡಿ ಕೊಟ್ಟ ಸನಾತನ ಸಂಸ್ಥೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಯಾರೇ ಆದರೂ ಸುಟ್ಟು ಭಸ್ಮ ಆಗಿ ಹೋಗುತ್ತಾರೆ ಎಂಬ ಎಚ್ಚರಿಕೆಯನ್ನು ಈ ಪ್ರತಿಭಟನೆಯ ಮೂಲಕ ತಿಳಿಸುತ್ತೇನೆ.

ಸನಾತನ ಸಂಸ್ಥೆಯವರು ಹಿಂದೂ ರಾಷ್ಟ್ರದಲ್ಲಿದ್ದಾರೆ ಈ ರಾಷ್ಟ್ರ ಹಿಂದೂ ರಾಷ್ಟ್ರವಾಗಿ ಉಳಿಯ ಬೇಕೆಂದು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಇಂತಹ ಸಂಸ್ಥೆಯ ಮೇಲೆ ಎನಾದರು ನಿರ್ಬಂಧ ಹೇರಿದರೆ ಶ್ರೀರಾಮ ಸೇನೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಶ್ರೀರಾಮ ಸೇನೆಯ  ಜಿಲ್ಲಾ ಪ್ರಾಂತ ಉಪಾಧ್ಯಕ್ಷ ಶ್ರೀ.ಕುಮಾರ ಮಾಲೆಮಾರ್ ಎಚ್ಚರಿಕೆಯನ್ನು ನೀಡಿದರು.

ಸನಾತನದ ಮೇಲೆ ಆರೋಪ ಹೊರಿಸಲು ಸಂಸ್ಥೆಯು ಮಾಡಿದ ತಪ್ಪೇನು ?  ಹಾಗಾದರೆ  ಇವತ್ತು ದೇಶದಲ್ಲಿ ಪಾಕಿಸ್ಥಾನ ಧ್ವಜ ಹಾರಿಸುತ್ತಾರೆ, ದೇಶದ್ರೋಹಿ ಘೋಷಣೆಗಳನ್ನು ಹಾಕುತ್ತಾರೆ, ದಿನಂಪ್ರತಿ ಬಾಂಬ್ ಸ್ಪೋಟ ಮಾಡಿ ಜೀವ ಹಾನಿ ಮಾಡುವವರನ್ನು ಪ್ರತ್ಯೇಕವಾದಿಗಳು ಎಂದು ಸರಕಾರ ಹೇಳುತ್ತದೆ ಆದರೆ ಸರಕಾರ ಅವರ ಮೇಲೆ ಎನೂ ಕಾರ್ಯಾಚರಣೆ ಮಾಡುವುದಿಲ್ಲ ಆದರೆ ದೇಶದ ಮುಖ್ಯ ವಾಹಿನಿಯಲ್ಲಿ ನಿಂತು ರಾಷ್ಟ್ರ, ಧರ್ಮದ ರಕ್ಷಣೆ ಮಾಡುವ ಸಂಸ್ಥೆಯ ಮೇಲೆ ನಿಷೇಧ ಮಾಡುವುದು ಯಾವ ನ್ಯಾಯ ಎಂದು  ಶ್ರೀ.ಧರ್ಮೇಂದ್ರ, ರಾಜ್ಯ ವಕ್ತಾರರು ಹಿಂದೂ ಮಹಾ ಸಭಾ ಕೇಳಿದರು.

ಸಂಸ್ಥೆಯ ಸಮಾಜದಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆಗಾಗಿ ಬಾಲ ಸಂಸ್ಕಾರ ವರ್ಗ ,ಹಾಗೂ ಧರ್ಮ ಶಿಕ್ಷಣ ಕೊಡುವಂತಹ ಕಾರ್ಯವನ್ನು ಮಾಡುತ್ತಿದೆ ಇಂತಹ ಧರ್ಮಕಾರ್ಯ ಮಾಡುವಂತಹ ಸಂಘಟನೆಯನ್ನು ಭಯೋತ್ಪಾಧಕ ಸಂಘಟನೆ ಎಂದು ಹೇಳುವುದು ಎಷು ಯೋಗ್ಯ ಇದೆ ? ಮಡಗಾವ್ ಸ್ಪೋಟದಲ್ಲಿ ಸನಾತನ ಸಾಧಕರ ಹತ್ಯೆ ಆದರೂ ಸಂಸ್ಥೆಯ ಸಾಧಕರನ್ನು ಆರೋಪಿಗಳೆಂದು ಬಂದಿಸಿದರು ಆದರೆ ಸತ್ಯಕ್ಕೆ ಜಯ ಇದೆ ಎಂಬಂತೆ ಎಲ್ಲರೂ ದೋಷ ಮುಕ್ತರಾಗಿ ಹೋರಗೆ ಬಂದರೂ ಈ ಸತ್ಯವನ್ನು ಯಾವುದೇ ಪತ್ರಿಕೆಯವರು ಪ್ರಕಟಿಸಲಿಲ್ಲ ಈ ಸಂಧರ್ಬದಲ್ಲಿ ಕೂಡ ಅದೇ ರೀತಿ ಆಗುತ್ತಿದೆ ಈ ಆರೋಪ ಕೂಡಾ ಸುಳ್ಳು ಎಂದು ಸಾಬೀತಾದ ಮೇಲೆ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುವಂತೆ  ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ ವಿಜಯಕುಮಾರ ವಿನಂತಿಸಿದರು.

ಕೊನೆಗೆ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಛೇರಿ ಪ್ರವೇಶಿಸಿ ಆಯಾ ಸಂಘಟಣೆಗಳು ತಂದಂತಹ ಮನವಿ ಪತ್ರಗಳನ್ನು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಮಂತ್ರಿಗಳಾದ ಶ್ರೀ ರಾಜನಾಥ ಸಿಂಗರವರಿಗೆ ನೀಡಲಾಯಿತು.

Leave a Reply