ಮಂಗಳೂರು ವಿವಿಯಲ್ಲಿ ನಿತೀಶ್ ಪಿ ಬೈಂದೂರು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಿತೀಶ್ ಪಿ ಬೈಂದೂರು ಇವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ.ಭೈರಪ್ಪ ಅವರು ಉದ್ಘಾಟಿಸಿದರು.

nithish-byndoor-photo-exhibition

ಉದ್ಘಾಟನಾ ಕಾರ್ಯಕ್ರಮದಲ್ಲಿ ತುಳು ಚಿತ್ರನಟ ದೇವಿದಾಸ್ ಕಾಪಿಕಾಡ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಾರುಕೂರು ಉದಯ, ನಿತೀಶ್ ಪಿ ಬೈಂದೂರು ಉಪಸ್ಥಿತರಿದ್ದರು. ಛಾಯಾಚಿತ್ರ ಪ್ರದರ್ಶನವು ದಿನಾಂಕ 22ರವರೆಗೂ ನಡೆಯಲಿರುವುದು

ಪ್ರಶಸ್ತಿ:

*ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
*ಮಂಗಳೂರು ವಿವಿ ಮಟ್ಟದಲ್ಲಿ ನಡೆದ ‘ಸ್ಪಾಟ್ ಫೋಟೋಗ್ರಾಫಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
*ಮಂಗಳೂರು ವಿವಿಯ ಎಂ.ಬಿ.ಎ ಟೂರಿಸಂ ಆಯೋಜಿಸಿರುವ ‘ಸ್ಪಾಟ್ ಫೋಟೋಗ್ರಾಫಿ’ ಸ್ಪರ್ಧೆಯಲ್ಲಿ ಎರಡು ವರ್ಷವೂ (2014 ಮತ್ತು 2015) ಪ್ರಥಮ ಸ್ಥಾನ.
* ಮಂಗಳೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಆಂಯೊಜಿಸಿದ್ದ ಸ್ಪಾಟ್ ಫೊಟೋಗ್ರಫಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತೇನೆ.
*ಬೆಂಗಳೂರಿನಲ್ಲಿ “ನಮ್ಮೂರ ಹಬ್ಬ-2015” ಪ್ರಯುಕ್ತ ನಡೆದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಸೈಂಟ್ ಅಲೋಷೀಯಸ್ ಕಾಲೇಜು ಮಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಮಂಗಳೂರು ವಿವಿ ಮಟ್ಟದಲ್ಲಿ ನಡೆದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*31ನೇ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ 2016ರ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
*2014ರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ “ಅತ್ಯುತ್ತಮ ಪತ್ರಿಕೋದ್ಯಮ ವಿದ್ಯಾರ್ಥಿ” ಎಂಬ ಪ್ರಶಸ್ತಿ ಪಡೆದಿರುತ್ತೇನೆ.
*2016 ರಲ್ಲಿ “ಚಾರು ಆರ್ಟ್ ಗ್ಯಾಲರಿ” ಮೈಸೂರು ಇವರು ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲಿ ಪ್ರಥಮ ಸ್ಥಾನ.
*2016 ರಲ್ಲಿ ಪಿಕ್ಸ್‍ಲ್ ಫೋಟೋಗ್ರಫಿ ಕ್ಲಬ್, ಬೆಂಗಳೂರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.

ಬಿರುದು:
ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ ಆರನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ” ಕರ್ನಾಟಕ ಪ್ರತಿಭಾರತ್ನ” ಬಿರುದು ನೀಡಿ ಗೌರವಿಸಿರುತ್ತಾರೆ.

Leave a Reply

Please enter your comment!
Please enter your name here