ಮಂಗಳೂರು: ವಿಶ್ವ ಕ್ಯಾನ್ಸರ್ ದಿನದಂದು ತನ್ನ ರೀತಿಯ ಮೊಟ್ಟ ಮೊದಲ ಹೀಮೊಫೀಲಿಯ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಆರಂಭಿಸಿದ ಕೆಎಂಸಿ ಆಸ್ಪತ್ರೆ

ಮಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ತನ್ನ ರೀತಿಯ ಮೊಟ್ಟ ಮೊದಲ ಹೀಮೊಫೀಲಿಯ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಮಕ್ಕಳು ಮತ್ತು ವಯಸ್ಕರಿಗಾಗಿ ಆರಂಭಿಸಿದೆ. ಈ ಕ್ಲಿನಿಕ್ ವಂಶವಾಹಿ ತೊಂದರೆಯಾದ ಹೀಮೊಫೀಲಿಯ(ಕುಸುಮ ರೋಗ ಎಂಬ ನಿಲ್ಲದ ರಕ್ತಸ್ರಾವದ ತೊಂದರೆ) ಹಾಗೂ ರಕ್ತ ಗರಣೆಗಟ್ಟುವ ತ್ರೋಂಬೋಟಿಕ್‍ರಂಥ ಇತರ ಸ್ಥಿತಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡುವಂಥದ್ದಾಗಿದೆ.

ಹೀಮೋಫೀಲಿಯದಲ್ಲಿ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಮಥ್ರ್ಯ ನಿಯಂತ್ರಣಕ್ಕೆ ಅಡ್ಡಿಯುಂಟಾಗುತ್ತದೆ. ರಕ್ತನಾಳವೊಂದು ಹರಿದಾಗ ರಕ್ತ ಹೊರಗೆ ಹರಿದುಹೋಗುವುದನ್ನು ತಡೆಯಲು ಅದು ಹೆಪ್ಪುಗಟ್ಟುವುದು ಅಗತ್ಯವಿರುತ್ತದೆ. ಈ ಕ್ಲಿನಿಕ್‍ನಲ್ಲಿ ಉನ್ನತ ಅರ್ಹತೆಯ ಮತ್ತು ಅನುಭವಿ ಕ್ಯಾನ್ಸರ್ ಆರೈಕ ತಂಡವನ್ನು ಹೊಂದಿದೆ. ಇದರಲ್ಲಿ ಸಲಹಾಕಾರ ಮಕ್ಕಳ ರಕ್ತರೋಗ ಶಾಸ್ತ್ರ ಮತ್ತು ಕ್ಯಾನ್ಸರ್ ರೋಗ ಶಾಸ್ತ್ರ ತಜ್ಞರಾದ ಡಾ. ಹರ್ಷಪ್ರಸಾದ, ವೈದ್ಯಕೀಯ ರಕ್ತ ರೋಗಶಾಸ್ತ್ರ ತಜ್ಞ, ಸಲಹಾಕಾರರಾದ ಡಾ. ಪ್ರಶಾಂತ್ ಬಿ. ಕ್ರೀಡಾ ಗಾಯಗಳು ಮತ್ತು ಬದಲಿ ಕೀಲು ಜೋಡಣೆಯ ಸಲಹಾಕಾರ ತಜ್ಞರಾದ ಡಾ. ಯೋಗೇಶ್ ಡಿ. ಕಾಮತ್ ಮುಂತಾದವರಿದ್ದಾರೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಗುರುವಾರ ಬೆಳಗ್ಗೆ 9.00ರಿಂದ 11.00 ಗಂಟೆವರೆಗೆ ಹೊರ ರೋಗಿಗಳ ತಪಾಸಣೆಯನ್ನು ಈ ಕ್ಲಿನಿಕ್ ಕೈಗೊಳ್ಳುತ್ತದೆ. ಫಿಸಿಯೋಥೆರಪಿ ತಜ್ಞರು ಚಿಕಿತ್ಸೆಗಾಗಿ ಸಲಹೆಗಳನ್ನು ನೀಡುವರು.

ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ಅವರು ಮಾತನಾಡಿ, ಇತ್ತೀಚಿನ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ನೀಡುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದು ಇದು ಏನೂ ಪ್ರತ್ಯೇಕವೇನಲ್ಲ. ಹೀಮೊಫೀಲಿಯ ಕ್ಲಿನಿಕ್‍ನ ಆರಂಭದೊಂದಿಗೆ   ಮಂಗಳೂರು ಮತ್ತು ನೆರೆಯ ರಾಜ್ಯಗಳಾದ ಕೇರಳದ ಜನರಿಗೆ ಹೆಚ್ಚು ಉತ್ತಮವಾದ ಕ್ಯಾನ್ಸರ್ ಆರೈಕೆಗೆ ಸಂಪರ್ಕ ಲಭ್ಯವಾಗಲಿದೆ ಎಂದರು.

ಜೀವಮಾನದ ಉದ್ದಕ್ಕೂ ಕಾಡುವ ಸ್ಥಿತಿಗಳ ಸಂಕೀರ್ಣ ಲಕ್ಷಣಗಳಿಗೆ ಬಹುವಿಭಾಗೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಇದಕ್ಕೆ ಸಲಹಾಕಾರರು, ದಾದಿಯರು, ವಿಶೇಷ ವೈದ್ಯ ತಜ್ಞರು ಮುಂತಾದವರ ಸಲಹೆ ಮತ್ತು ಫಿಸಿಯೋಥೆರಪಿಯ ಅಗತ್ಯವಿರುತ್ತದೆ. ಇಂಥ ಸಂಕೀರ್ಣ ಪ್ರಕರಣಗಳ ನಿರ್ವಹಣೆಗೆ ಪರಿಣತಿಯನ್ನು ನಾವು ಸಾದರಪಡಿಸುತ್ತಿದ್ದು, ಮಕ್ಕಳ ಮತ್ತು ವಯಸ್ಕರ ಹೀಮಟಾಲಜಿ ಸೇವೆಗಳನ್ನು ಹೊಂದಿರುವ ಏಕೈಕ ಆಸ್ಪತ್ರೆ ನಮ್ಮದಾಗಿದೆ. ವಯಸ್ಕರಾದ ನಂತರ ತೊಂದರೆ ಉಂಟು ಮಾಡಬಹುದಾದ ತ್ರೋಂಬೋಟಿಕ್ ಸ್ಥಿತಿಗಳಿಗೂ ಮಕ್ಕಳಿಗೆ ನಾವು ಚಿಕಿತ್ಸೆ ನೀಡುತ್ತೇವೆ ಎಂದರು.

ಹೀಮೊಫೀಲಿಯಾಗೆ ಮುಖ್ಯ ಚಿಕಿತ್ಸೆ ಎಂದರೆ ರಿಪ್ಲೇಸ್‍ಮೆಂಟ್ ಥೆರಪಿಯಾಗಿದೆ. ಇದರಲ್ಲಿ ರಕ್ತ ಹೆಪ್ಪುಗಟ್ಟಲು ನೆರವಾಗುವ ಕ್ಲಾಟಿಂಗ್ ಫ್ಯಾಕ್ಟರ್ ಗಿIII (ಹೀಮೋಫೀಲಿಯ ಎ ಗಾಗಿ) ಅಥವಾ ಕ್ಲಾಟಿಂಗ್ ಫ್ಯಾಕ್ಟರ್  Iಘಿ (ಹೀಮೋಫೀಲಿಯ ಎ ಗಾಗಿ)ಗಳನ್ನು ನಿಧಾನವಾಗಿ ರಕ್ತನಾಳದೊಳಕ್ಕೆ ಡ್ರಿಪ್ ಮೂಲಕ ಇಳಿಸಲಾಗುತ್ತದೆ. ರಕ್ತದಲ್ಲಿ ಕಡಿಮೆ ಅಥವಾ ಇಲ್ಲದಿರುವ ಹೆಪ್ಪುಗಟ್ಟಿಸುವ ಕ್ಲಾಟಿಂಗ್ ಫ್ಯಾಕ್ಟರ್‍ಗಳನ್ನು ಬದಲಿಯಾಗಿ ಸೇರಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ.

Leave a Reply

Please enter your comment!
Please enter your name here