ಮಂಗಳೂರು: ವೇದ ಪಾಠಕ್ಕೆ ಲೇಟಾಗಿ ಬಂದಿದ್ದಕ್ಕೆ ವಿದ್ಯಾರ್ಥಿಗೆ ಥಳಿತ

ಮಂಗಳೂರು: ವೇದ ಪಾಠಕ್ಕೆ ಲೇಟಾಗಿ ಬಂದ ಎಂಬ ಕಾರಣಕ್ಕೆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಶಿಕ್ಷಕರೊಬ್ಬರು ಮನಬಂದಂತೆ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಾಹ್ಮಣ ಮಕ್ಕಳಿಗೆ ವೇದ ಪಾಠ ಹೇಳಿಕೊಡಲಾಗುತ್ತಿದ್ದು, ಈ ವೇದ ಪಾಠಕ್ಕೆ ವಿದ್ಯಾರ್ಥಿಯೊಬ್ಬ ತಡವಾಗಿ ಬಂದ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕರು ಎಲ್ಲರ ಸಮ್ಮುಖದಲ್ಲಿ ಚಿತ್ರಹಿಂಸೆ ಮಾಡಿದ್ದಾರೆ.

ಜೊತೆಗೆ ದೇವಸ್ಥಾನದಲ್ಲಿದ್ದ ವಿಟ್ಲ ಅರಸರ ಕುರ್ಚಿಯಲ್ಲಿ ಬಾಲಕ ಕೂತಿದ್ದದ್ದನ್ನು ನೆಪವನ್ನಾಗಿಸಿದ ಶಿಕ್ಷಕ ನೀನು ಬ್ರಾಹ್ಮಣನಾ? ಅಲ್ಲ ಕ್ಷತ್ರಿಯನಾ.? ಕ್ಷತ್ರಿಯರ ಕುರ್ಚಿಯಲ್ಲಿ ಕುಳಿತು ಕಳಂಕ ಉಂಟು ಮಾಡುತ್ತಿಯಾ. ಮರ್ಯಾದೆಯಲ್ಲಿ ವೇದ ಪಾಠಕ್ಕೆ ಬಂದರೆ ಬದುಕುಳಿಯುತ್ತೀಯ ಎಂದೆಲ್ಲಾ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಾ ಥಳಿಸಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು ಇದೀಗ ಚಿತ್ರೀಕರಣ ಮಾಡಿದವರು ವಾಟ್ಯ್ಸಾಪ್‍ನಲ್ಲಿ ಹರಿಯ ಬಿಟ್ಟಿದ್ದಾರೆ. ಈ ಮನಕಲಕುವ ದೃಶ್ಯ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

Leave a Reply