ಮಂಗಳೂರು: ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ : ಯು ಟಿ ಖಾದರ್

ಮಂಗಳೂರು: ವೈದ್ಯಕೀಯ ವ್ಯಾಸಂಗವನ್ನು ಪೂರ್ತಿಗೊಳಿಸಿದ ಅಬ್ಯರ್ಥಿಗಳೂ ಕನಿಷ್ಟ ಒಂದು ವರ್ಷವಾದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಅವರು ಬುಧವಾರ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವೈದ್ಯಕೀಯ ವ್ಯಾಸಂಗವನ್ನು ಪೂರ್ತಿಗೊಳಿಸಿದ ಬಳಿಕ ಕನಿಷ್ಠ ಒಂದು ವರುಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ತಪ್ಪಿದ್ದಲ್ಲಿ ಅವರ ವ್ಯಾಸಂಗ ಕೊನೆಗೊಳಿಸಿದ ಅರ್ಹತಾ ಪತ್ರವನ್ನು ತಡೆಹಿಡಿಯಲಾಗುವುದು ಎಂದರು.

khader_pressmeet_mm-002

ಪ್ರಸ್ತುತ ವರುಷ 6675 ವಿದ್ಯಾರ್ಥಿಗಳು ವೈದ್ಯಕೀಯ ಪರೀಕ್ಷೆಯನ್ನು ಬರೆದಿದ್ದು, 2988 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಮುಗಿಸಲಿದ್ದಾರೆ ಅವರುಗಳ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೆ ಉಪಯೋಗಿಸಿಕೊಳ್ಳಲಾಗುವುದು ಎಂದರು.

ಪ್ರಸ್ತುತ ರಾಜ್ಯದಲ್ಲಿ 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 146 ತಾಲೂಕು ವೈದ್ಯಾಧಿಕಾರಿಗಳನ್ನು ಹೊಂದಿದೆ. ಅಲ್ಲದೆ 206 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, 30 ಜಿಲ್ಲಾ ವೈದ್ಯರುಗಳನ್ನು ಹೊಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಲಭ್ಯರಿದ್ದು, ಕಾರ್ಮಿಕ ವರ್ಗದವರಿಗೆ ಇದರಿಂದ ತೊಂದರೆಯಾಗುತ್ತಿದೆ ಆದ್ದರಿಂದ ವೈದ್ಯರ ಸೇವೆ ಅವಧಿಯನ್ನು ಸಂಜೆ 8 ರ ತನಕ ವಿಸ್ತರಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ನೇಮಕಾತಿಗಾಗಿ ಪ್ರತೈಕ ಸಮಿತಿಯನ್ನು ನೇಮಿಸಲಾಗುವುದು ಎಂದರು.

983 ಪದವಿ ವೈದ್ಯರು ಹಾಗೂ 350 ಎಮ್ ಬಿ ಬಿಎಸ್ ವೈದ್ಯರ ನೇಮಕಾತಿಗಾಗಿ ಸಂಪುಟ ಈಗಾಗಲೇ ಅನುಮತಿಯನ್ನು ನೀಡಿದ್ದು, ಮಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ವಿಶೇಷ ಬದಲಾವಣೆ ಕಾಣ ಸಿಗುವುದು ಎಂದರು. ರಾಜ್ಯ ಸರಕಾರ ಮ್ಯಾಗಿ ನೂಡಲ್ಸ್ ಪರೀಕ್ಷೆಗೆ ಕಳುಹಿಸಿದ್ದು ಅದರ ವರದಿಯನ್ನು ಎದರು ನೋಡುತ್ತಿದ್ದೇವೆ ಎಂದರು.

Leave a Reply

Please enter your comment!
Please enter your name here