ಮಂಗಳೂರು : ವೈಯಕ್ತಿಕ ದ್ವೇಷ: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಿಗೆ ಹಲ್ಲೆ

ಮಂಗಳೂರು : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಯುವಕನಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಮಾರ್ನಮಿಕಟ್ಟೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಮಾರ್ನಮಿಕಟ್ಟೆ ಸಮೀಪದ ನಿವಾಸಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಸಂದೀಪ್‌ ಶೆಟ್ಟಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಮಾರ್ನಮಿಕಟ್ಟೆ ಬಳಿ ಕೌಶಿಕ್‌ ಎಂಬಾತ ಇತರ ಕೆಲವರೊಂದಿಗೆ ಸೇರಿ ಸಂದೀಪ್‌ ಮೇಲೆ ನಡೆಸಿದ್ದು, ಸಂದೀಪ್‌ ಮತ್ತು ಕೌಶಿಕ್‌ ನಡುವಿನ ವೈಯಕ್ತಿಕ ದ್ವೇಷವೇ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದೆ.

ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply