ಮಂಗಳೂರು: ವ್ಯಕ್ತಿಯೋರ್ವರಿಗೆ ಯುವಕರಿಂದ ಚೂರಿ ಇರಿತ ಆಸ್ಪತ್ರೆಗೆ ದಾಖಲು

ಮಂಗಳೂರು: 37 ವರುಷದ ವ್ಯಕ್ತಿಯೋರ್ವರರನ್ನು ಯುವನೋರ್ವ ಹಲ್ಲೆ ನಡೆಸಿದ ಘಟನೆ ಬೊಂದೆಲ್ ಕೃಷ್ಣಾನಗರ ಮೈದಾನಲ್ಲಿ ಜೂನ್ 3ರಂದು ನಡೆದಿದೆ.

ಗಾಯಗೊಂಡವರನ್ನು ಬೊಂದೆಲ್ ನಿವಾಸಿ ಮೊಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ.

youth-assault-man-20150603-002 youth-assault-man-20150603-003

ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಮುಸ್ತಾಫ ಅವರು ಮೇ 31 ರಂದು ವಿವಾಹಿತರು ಮತ್ತು ಅವಿವಾಹಿತರ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಿದ್ದು, ಪಂದ್ಯಾಟದ ಮಧ್ಯೆ ದಿನೇಶ್ ಎನ್ನುವವರು ನನ್ನ ಸಹೋದರ ನವಾಝ್ ಅವರಿಗೆ ಕೆಟ್ಟ ಭಾಷೆಯಲ್ಲಿ ಬೈದಿದ್ದು ಆ ಸಮಯದಲ್ಲಿ ನಾನು ದಿನೇಶ್‍ಗೆ ಕೆಟ್ಟ ಭಾಷೆಯಲ್ಲಿ ಬೈಯದಂತೆ ಎಚ್ಚರಿಕೆ ನೀಡಿದ್ದೆ ಆ ವೇಳೆ ಜೀವ ಬೆದರಿಕೆ ಒಡ್ದಿದ್ದ. ಜೂನ್ 2 ರ ಸಂಜೆ ದಿನೇಶ್ ಚಂದು ಮತ್ತು ಸತೀಶ್ ಜೊತೆ ಬೊಂದೆಲ್ ಮೈದಾನಕ್ಕೆ ಬಂದು ಹೊಡೆಯಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡೆವು ಆದರೆ ಬುಧವಾರ ಸತೀಶ್ ಬೊಂದೆಲ್‍ಗೆ ಪುನಃ ಬಂದು ಹರಿತವಾದ ಚೂರಿಯಿಂದ ತನ್ನನ್ನು ಇರಿದಿದ್ದು, ತನ್ನ ಸಹೋದರ ನನ್ನನ್ನು ರಕ್ಷಿಸಲು ಬಂದ ವೇಳೆ ಆತನಿಗೂ ಕೂಡ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗಾಯಗೊಂಡ ಮುಸ್ತಾಫ ಅವರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ

Leave a Reply