ಮಂಗಳೂರು: ಶಾಸಕ ಜೆ, ಆರ್. ಲೋಬೊ ಭಾರತಿ ಶೀಪ್‍ಯಾರ್ಡ್ ಸಂಸ್ಥೆಗೆ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ತನ್ನೀರುಬಾವಿ ಬಳಿ ಇರುವ ಭಾರತಿ ಶೀಪ್‍ಯಾರ್ಡ್ ಸಂಸ್ಥೆಗೆ ಶಾಸಕ ಜೆ, ಆರ್. ಲೋಬೊರವರು ಸೋಮವಾರ ಭೇಟಿ ನೀಡಿ, ಅಲ್ಲಿ ನಡೆಯುತ್ತೀರುವ ಕೆಲಸ ಕಾರ್ಯಗಳನ್ನು ಪರಿಶೀಲಿಸಿ, ಸಿಬ್ಬಂದಿಗಳ ಹಾಗು ಅಡಳಿತ ಮಂಡಳಿಯ ಜೋತೆಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಅಲಿಸಿದರು.

shipyardjrlobo

ಭಾರತಿ ಶೀಪ್‍ಯಾರ್ಡ್ ಸಂಸ್ಥೆಯು ನಷ್ಟದಲ್ಲಿದ್ದು ಇದನ್ನು ಉಳಿಸುವುದು ಅತ್ಯಗತ್ಯ. ಇಲ್ಲಿ ನೂರಾರು ಸಿಬ್ಬಂದಿಗಳು ಕೆಲಸಕ್ಕೆ ಇದ್ದು, ಈ ಸಂಸ್ಥೆಗೆ ಮರು ಜೀವ ಕೊಡುವ ಸರ್ವ ಪ್ರಯತ್ನ ಮಾಡಲಾಗುವುದು. ಕರ್ನಾಟಕ ಸರಕಾರದ ಬೃಹತ್ ಮತ್ತು ಸಣ್ಣ ಕೈಗಾರಿಕೆ ಇಲಾಖೆಯ ಸಚಿವರಾದ ಆರ್.ವಿ. ದೇಶ್ ಪಾಂಡೆಯಾವರಿಗೆ ಈ ಕೂಡಲೆ ಪತ್ರ ಬರೆದು, ನಂತರ ಭೇಟಿಯಾಗಿ, ಈ ಸಂಸ್ಥೆಯ ಸಮಸ್ಯೆಯನ್ನು ಅವರಿಗೆ ಮಾನವರಿಕೆ ಮಾಡಲ್ಲು ಪ್ರಯತ್ನಿಸುತ್ತೇನೆ. ಸಾಧ್ಯವದಲ್ಲಿ, ಸಚಿವರನ್ನು ಇಲ್ಲಿಗೆ ಕರೆತರಿಸಿ, ಈ ಸಂಸ್ಥೆಯನ್ನು ಉಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತೇನೆಂದು ಸಿಬ್ಬಂದಿಗಳಿಗೆ ತೀಳಿಸಿದರು.

Leave a Reply

Please enter your comment!
Please enter your name here