ಮಂಗಳೂರು: ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ಗಮನ ಅಗತ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಕರೆ

ಮಂಗಳೂರು: ಪಾಲಿಟೆಕ್ನಿಕ್‍ನಲ್ಲಿ ರಾಜ್ಯದ ಶಿಕ್ಷಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪಾಲಿಟೆಕ್ನಿಕ್ ಶಿಕ್ಷಕರುಗಳ ಪಾತ್ರ ಮಹತ್ವವಾದುದು. ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‍ಗಳ ಮೌಲ್ಯಮಾಪನ ಕಾರ್ಯದಲ್ಲಿ ನಿರತರಾದ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಐವನ್ ಡಿಸೋಜಾರವರು ಉತ್ತಮ ಶಿಕ್ಷಣ ಗುಣಮಟ್ಟದ ಜೊತೆಗೆ ಮಾಲ್ಯದಿಂದ ಕೂಡಿದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದರು.

ivan

ಶಿಕ್ಷಕರು ಸಮಾಜವನ್ನು ರೂಪಿಸುವ ಕೆಲಸವನ್ನು ಮಾಡುವುದರ ಜೊತೆಗೆ ಮೌಲ್ಯಧಾರಿತ ಶಿಕ್ಷಣದ ಅಗತ್ಯತೆ ಇಂದು ಬಹಳವಾಗಿ ಕಾಡುತ್ತದೆ. ಶಿಕ್ಷಣ ಎಂದರೆ ಅದು ಸರ್ವತೋಮುಖ ಅಭಿವೃದ್ದಿಗೆ ಪಾತ್ರವಾಗಬೇಕೆಂದು ನುಡಿದರು.

ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಹಾಸ್ಟೆಲ್‍ಗೆ ಭೇಟಿ: ವಿಧಾನ ಪರಿಷತ್ ಶಾಸಕರಾದ       ಶ್ರೀ ಐವನ್ ಡಿಸೋಜಾರವರ ವಿನಂತಿ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯವು ತೀರಾ ಹದಗೆಟ್ಟಿದ್ದು ವಾಸಕ್ಕೆ ಯೋಗ್ಯವಲ್ಲದ ಕಟ್ಟಡದ ರಿಪೇರಿ 125.00ಲಕ್ಷ ರೂ.ಗಳನ್ನು ನೀಡಿದ್ದು ಈ ಬೇಡಿಕೆಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಆದೇಶದಂತೆ ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆಯು ರೂ. 90.00ಲಕ್ಷ ರೂಪಾಯಿಗಳನ್ನು ಹಾಸ್ಟೆಲ್ ದುರಸ್ತಿಗಾಗಿ ವಿನಿಯೋಗ ಮಾಡಲು ತಾಂತ್ರಿಕ ನಿರ್ದೇಶಕರಿಗೆ ಸೂಚನೆ ನೀಡಿದರು. ಕಾರ್ಯನಿರ್ವಹಣೆಗೆ ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಿದರು, ಹಣ ಬಿಡುಗಡೆ ಮಾಡಲು ನಿರ್ದೇಶಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜರವರು ಪಾಲಿಟೆಕ್ನಿಕ್ ಹಾಸ್ಟೆಲ್ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರರು ಶ್ರೀ ಹರೀಶ್ ಕುಮಾರ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು  ಶ್ರೀಮತಿ ಸುಶೀಲ ಕುಮಾರಿ, ದೇವರಸನ ಗೌಡ, ರಿಜಿಸ್ಟರ್ ರಾಜೇಂದ್ರ ಗೌಡ, ಅಬ್ದುಲ್ ಖಾದರ್, ಮೋಹನ್ ರಾಜ್, ನರಸಿಂಹ ಭಟ್, ಲಕ್ಷಣ, ರೋನಾಲ್ಡ್ ಆಲ್ಟ್ಸೀನ್ ಡಿಕುನ್ಹ ಜೊತೆಗಿದ್ದರು.

Leave a Reply

Please enter your comment!
Please enter your name here