ಮಂಗಳೂರು: ಶ್ರೀ ಜೆ. ಅಂಡ್ರೂಸ್ ಅವರಿಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ಪರಿಹಾರ ಧನ ಹಸ್ತಾಂತರಿಸಲಾಯಿತು

ಮಂಗಳೂರು: ಮಧುಮೇಹದಿಂದಾಗಿ ಗ್ಯಾಂಗ್ರಿನ್ ಪೀಡಿತರಾಗಿ ಒಂದು ಕಾಲನ್ನು ಕಳೆದುಕೊಂಡು  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂದೂರು ಶಾಂತಿನಗರ ವಾರ್ಡಿನ ಶ್ರೀ ಜೆ. ಅಂಡ್ರೂಸ್ ಇವರಿಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ರೂ.1,32,054/- ದ ಚೆಕ್‍ನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ಅವರ ಮನೆಗೆ ತೆರಳಿ  ಹಸ್ತಾಂತರಿಸಿದರು.

1-ivan

ಈ ಸಂದರ್ಭದಲ್ಲಿ ಸಿ.ಎಸ್.ಐ. ಸುಕಾಂತಿ ದೇವಾಲಯದ ಪರವಾಗಿ ಶಾಸಕರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು. ರೆ| ಸಂಜೀವ ಪುತ್ರನ್ ಹಾಗೂ   ರೆ| ಪ್ರವೀಣ್ ಮಾಬೆನ್‍ರವರು ಪ್ರಾರ್ಥನೆ ಹಾಗೂ ಆಶೀರ್ವಚನ ಮಾಡಿದರು.

ಈ ಸಂದರ್ಭದಲ್ಲಿ ಶೀ ಜೇಮ್ಸ್ ಪ್ರವೀಣ್, ಹ್ಯಾಂಡ್ಲಿ ಸೈಮನ್, ಜೋಫ್ರಿ ಜೋನಾಸ್, ಸ್ಟೀಫನ್ ಮರೋಳಿ, ಸುನಿಲ್ ಸೋನ್ಸ್, ಮಹೇಶ್ ಕೋಡಿಕಲ್, ಸುಂದರ್ ಮುಂತಾದವರು ಉಪಸ್ಥಿರಿದ್ದರು.

ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 8 ಮಂದಿ ಅರ್ಜಿದಾರರಿಗೆ ರೂ. ಒಂಬತ್ತು ಲಕ್ಷದ ಮೂವತೈದು ಸಾವಿರ   (ರೂ.9,35,000/-) ಪರಿಹಾರ ಧನ ಬಿಡುಗಡೆ.

ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ      ಶ್ರೀಯುತ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 8 ಮಂದಿ ಅರ್ಜಿದಾರರಿಗೆ ಒಟ್ಟು ರೂ 9,35,000/- ಪರಿಹಾರ ಧನ ಬಿಡುಗಡೆಗೊಳಿಸಿದರು.

ಶ್ರೀ ಮನ್ಸೂರ್ ಆಲಿ ಉಳ್ಳಾಲ ಇವರಿಗೆ ರೂ.40,000/-, ಶ್ರೀಮತಿ ಲಕ್ಷ್ಮೀ ಕೋಂ: ದಿ| ವೆಂಕಪ್ಪ ಪೂಜಾರಿ ಮಂಗಳೂರು ರೂ.1.00ಲಕ್ಷ, ಶ್ರೀ ಅಬ್ದುಲ್ ಖಾದರ್ ಸಮದ್ ಕೊಡಗು ಇವರಿಗೆ ರೂ.2.00ಲಕ್ಷ, ಶ್ರೀ ಶಬೀರ್ ಮುನ್ನೂರು ಇವರಿಗೆ ರೂ. 50,000/-, ಶ್ರೀ ದೀಕ್ಷೀತ್ ಮೊಂತೆರೊ ಕೂಳೂರು ಇವರಿಗೆ ರೂ.2.00ಲಕ್ಷ, ಶ್ರೀ ಅಬ್ದುಲ್ ಖಾದರ್ ಕಾಟಿಪಳ್ಳ ಇವರಿಗೆ ರೂ.70,000/-, ಶ್ರೀಮತಿ ಇಂದಿರಾ ಉಡುಪಿ ಇವರಿಗೆ ರೂ.75,000/-, ಶ್ರೀ ದಯಾಕರ ಮರೋಳಿ ಇವರಿಗೆ ರೂ.2.00ಲಕ್ಷ ಎಂದು ಶಾಸಕರ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here