ಮಂಗಳೂರು: ಸಂಗೀತೋತ್ಸವ ಮತ್ತು ಪುಟ್ಟರಾಜ ಸಮ್ಮಾನ ಕಾರ್ಯಕ್ರಮ

ಮಂಗಳೂರು: ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಧಾರವಾಡ, ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಪಬ್ಲಿಕ್ ರಿಕ್ರೀಶಯೇಶನ್ ಅಸೋಷಿಯೇಶನ್ ಗಂಗಾವತಿ ಇದರ ವತಿಯಿಂದ ಇದೇ ಬರುವ ಗುರುವಾರ ತಾ 03.03.2016 ರಂದು ಮಂಗಳೂರು ಪುರಭವನದಲ್ಲಿ ಸಂಜೆ 6.00 ಘಂಟೆಯಿಂದ ಡಾ.ಪುಟ್ಟರಾಜ ಗವಾಯಿಗಳ 103ನೆಯ ಜನ್ಮದಿನದ ಪ್ರಯುಕ್ತ ಸಂಗೀತೋತ್ಸವ ಮತ್ತು ಪುಟ್ಟರಾಜ ಸಮ್ಮಾನ – 2016 ಹಾಗೂ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ.

2-20160301-puttaraj-samman-001

ಈ ಬಾರಿಯ ಪುಟ್ಟರಾಜ ಸಮ್ಮಾನಕ್ಕೆ ಗ್ವಾಲಿಯರ್ ಘರಾನದ ಸುಪ್ರಸಿದ್ಧ ಹಿರಿಯ ಗಾಯಕರಾದ  ಮುಂಬೈನ ಪಂಟಟ ವಿದ್ಯಾಧರ್ ವ್ಯಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಮ್ಮಾನವು 1 ಲಕ್ಷ ರೂ. ಹಾಗೂ ಪುರಸ್ಕಾರವನ್ನು ಒಳಗೊಂಡಿರುತ್ತದೆ.

ಡಾ.ಪುಟ್ಟರಾಜ ಗವಾಯಿಗಳ 103 ನೆಯ ಜನ್ಮದಿನ ಪ್ರಯುಕ್ತ ಸಂಗೀತೋತ್ಸವ ಮತ್ತು ಪುಟ್ಟರಾಜ ಸಮ್ಮಾನ 2016 ರ ಸಮಾರಂಭದ ಕಾರ್ಯಕ್ರಮದಲ್ಲಿ ಮುಂಬೈನ ಪಂಟಟ ವಿದ್ಯಾಧರ್ ವ್ಯಾಸ್ ಅವರನ್ನು ‘ಪುಟ್ಟರಾಜ ಸಮ್ಮಾನ’ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ರಾಜ್ಯ ಅರಣ್ಯ ಇಲಾಖೆ ಸಚಿವರಾದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ  ಸನ್ಮಾನ್ಯ ಶ್ರೀ ಬಿ.ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲೆ ಮಾನ್ಯ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಶ್ರೀ ಎ.ಬಿ.ಇಬ್ರಾಹಿಂ ಹಾಗೂ ಪುಟ್ಟರಾಜ ಗವಾಯಿ ಅವರ ನೆಚ್ಚಿನ ಶಿಷ್ಯ, ಇತ್ತೀಚಿಗೆ ಕೇಂದ್ರ ಸರಕಾರದಿಂದ ಪದ್ಮಶ್ರೀ ಪುರಸ್ಕೃತ ಪಂಟಟ ವೆಂಕಟೇಶ್ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಹಾಬಳೇಶ್ವರ ಹಾಸಿನಾಳ ರವರು ವಹಿಸಿಕೊಳ್ಳಲಿದ್ದಾರೆ.

1-20160301-puttaraj-samman

ಬಳಿಕ ಮುಂಬೈ ಪಂಟಟ ವಿದ್ಯಾಧರ್ ವ್ಯಾಸ್ ಅವರಿಂದ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾರ್ಮೋನಿಯಂ ಸಾಥೀದಾರರಾಗಿ ಮಂಗಳೂರಿನ ಶ್ರೀ ನರೇಂದ್ರ ಎಲ್ ನಾಯಕ್ ಹಾಗೂ ತಬ್ಲಾದಲ್ಲಿ ಬೆಂಗಳೂರಿನ ಪಂಟಟ ರವೀಂದ್ರ ಯಾವಗಲ್ ರವರು ಸಹಕರಿಸಲಿದ್ದಾರೆ.

ಅಪರೂಪದ ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತಾಸಕ್ತರು ಇದರ ಪ್ರಯೋಜನ ಪಡೆಯ ಬೇಕಾಗಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ ರವರು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್, ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ರಾವ್ ಪೆರೋಡಿ, ಖಚಾಂಚಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ಹಾಗೂ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಸದಸ್ಯರಾದ ಖ್ಯಾತ ಗಾಯಕ ಶ್ರೀ ಮೌನೇಶ್ ಕುಮಾರ್ ಛಾವಣಿ ಅವರು ಉಪಸ್ಥಿತರಿದ್ಧರು.

ಈ ಕಾರ್ಯಕ್ರಮಕ್ಕೆ ವಿಶೇಷ ರೀತಿಯ ಪ್ರಚಾರ ನೀಡಬೇಕಾಗಿ ಮಾಧ್ಯಮ ಮಿತ್ರರಲ್ಲಿ ಮೂಲಕ ವಿನಂತಿಸಿ ಕೊಳ್ಳಲಾಗಿದೆ.

Leave a Reply

Please enter your comment!
Please enter your name here