ಮಂಗಳೂರು: ಸವಕಲು ನೋಟಿನ ವಿನಿಮಯಕ್ಕೆ ವಿಶೇಷ ಅಭಿಯಾನ

ಮಂಗಳೂರು: ಸವಕಲು ನೋಟಿನ ವಿನಿಮಯಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ವಿವಿಧ ಕೇಂದ್ರಗಳಲ್ಲಿ ಫೆ. 9 ರಿಂದ 3 ದಿನಗಳ ಕಾಲ ವಿಶೇಷ ಕೌಂಟರುಗಳನ್ನು ಆರಂಭಿಸಲಿದೆ.

ಸವಕಲು ನೋಟಿನ ಚಲಾವಣೆಯನ್ನು ಸಂಪೂರ್ಣ ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಹೊರಡಿಸಿರುವ ನಿರ್ದೇಶನದ ಮೇರೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಈ ವಿಶೇಷ ಅಭಿಯಾನಕ್ಕೆ  ಮುಂದಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಶೋಕ ರೆಡ್ಡಿ ತಿಳಿಸಿದ್ದಾರೆ.

1-currency

ಶಿಬಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರ ವರೆಗೆ ಮಾಸಲಾದ, ಸವಕಲುಗೊಂಡ ಮತ್ತು ತುಂಡಾಗಿ ಅಂಟಿಸಿದ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ವಿತರಿಸಲಾಗುವುದು ಎಂದಿರುವ ಅವರು ಈ ಶಿಬಿರಗಳ ಪೂರ್ಣ ಪ್ರಯೋಜನ ಪಡೆಯಲು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ವಿಶೇಷ ಕೌಂಟರುಗಳನ್ನು ಕರ್ನಾಟಕ ವಿಕಾಸ ಗ್ರಾಮಿಣ ಬ್ಯಾಂಕ್, ಪಿವಿಎಸ್-ಬಂಟ್ಸ್‍ಹಾಸ್ಟೆಲ್ ರಸ್ತೆ, ಮಂಗಳೂರು  ಇಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here