ಮಂಗಳೂರು:  ಸಸಿ ನೆಟ್ಟು ಪರಿಸರ ದಿನಾಚರಣೆ

ಮಂಗಳೂರು: ಸೋಹಂ ರಿನ್ಯೂವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿ (SREIPL) ಕಂಪನಿಯು ಮೂಡಬಿದ್ರಿಯಲ್ಲಿರುವ ತನ್ನ ಎರಡು ಎಸ್‍ಎಚ್‍ಪಿ ಯೋಜನೆಗಳ ಆವರಣದಲ್ಲಿ ಸತತ ಮೂರನೆಯ ವರ್ಷವೂ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.

ಕಂಪನಿಯು ತನ್ನ ಎರಡು ಯೋಜನೆಗಳಾದ ಎಸ್‍ಎಂಪಿಪಿಎಲ್ ಸೋಹಂ ಮನ್ನಪಿಟ್ಲು ಮತ್ತು ಮೂಡಬಿದ್ರೆಯಲ್ಲಿರುವ ಎಸ್‍ಪಿಆರ್‍ಇಎಲ್ ಸೋಹಂ ಫಲ್ಗುಣಿ ರಿನ್ಯೂವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿಗಳ ಆವರಣದಲ್ಲಿ ಮಾವು, ಹಲಸು, ಮತ್ತು ಸಾಗುವಾನಿ, ಬೀಟೆ ಸಸಿಗಳನ್ನು ನೆಡುವ ಮೂಲಕ ಜೂನ್ 5, 2015ರಂದು ರಂದು ವಿಶ್ವ ಪರಿಸರ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಿತು.

3

ಬೆಂಗಳೂರು ಮೂಲದ ಈ ಕಂಪನಿಯು ಕಳೆದ ಮೂರುವರ್ಷಗಳಿಂದಲೂ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಜೋಗ, ಮೂಡುಬಿದ್ರಿ, ಮಹದೇವಪುರಗಳಲ್ಲಿರುವ ತನ್ನ ಯೋಜನೆಗಳ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನವನ್ನು ಪಾಲಿಸಿಕೊಂಡು ಬಂದಿದೆ. ಕಳೆದ ವರ್ಷ ಮಹದೇವಪುರ ಕಿರು ಜಲವಿದ್ಯುತ್ ಶಕ್ತಿ ಯೋಜನೆಯ ಸುತ್ತಮುತ್ತ ಗಿಡಮರಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ಬೆಳೆಸಿಕೊಂಡು ಬರುತ್ತಲಿದೆ. ಈಗ ಈ ಗಿಡಗಳೆಲ್ಲವೂ ವ್ಯವಸ್ಥಿತ ಆರೈಕೆಯೊಂದಿಗೆ ಬೆಳವಣಿಗೆ ಹೊಂದುತ್ತಿದ್ದು ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಹಸಿರು ಕಂಗೊಳಿಸುತ್ತಿದೆ.

ಇಂದು ನಡೆದ ಸಮಾರಂಭದಲ್ಲಿ ಮಾತನಾಡಿದ ಮೂಡಬಿದ್ರೆಯ ನಗರಾಭಿವೃದ್ದಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಶ್ರೀ ಸುರೇಶ್ ಕೋಟ್ಯನ್ ಅವರು ಮಾತನಾಡಿ, “ಸೋಹಂ ಸಮೂಹವು ಗಿಡ ನೆಟ್ಟು ಬೆಳೆಸುವ ಪರಿಪಾಠವನ್ನು ಪ್ರತಿವರ್ಷವೂ ಅನುಸರಿಸಿಕೊಂಡು ಬದಂದಿರುವುದನ್ನು ನಾನು ಶ್ಲಾಘಿಸ ಬಯಸುತ್ತೇನೆ.

2 1

ನಮ್ಮ ಪರಿಸರವನ್ನು ರಕ್ಷಿಸುವ ಅವಶ್ಯಕತೆಯನ್ನು ಪ್ರಯತ್ನಪೂರ್ವಕವಾಗಿ ನೆನಪಿಸುತ್ತಿರುವ ಕಂಪನಿಯ ಕೆಲಸ ಸ್ತುತ್ಯಾರ್ಹವಾದದ್ದು. ಈ ದಿನ, ಸಾಂಕೇತಿಕವಾಗಿ ಈ ಯೋಜನಾ ಆವರಣದಲ್ಲಿ ಗಿಡನೆಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.  ಇದು ನಮ್ಮ ಪರಿಸರದೊಂದಿಗೆ ನಮಗಿರುವÀ ಆಳವಾದ ಬದ್ಧತೆಯನ್ನು ಸೂಚಿಸುತ್ತದೆ. ಜಾಗತಿಕವಾಗಿ, ಮರಗಳು ವಾತಾವರಣದ ಬದಲಾವಣೆಯೊಂದಿಗೆ ನೇರ ಸಂಬಂಧವನ್ನು ಹೊಂದಿವೆ ಮತ್ತು ನಿಸರ್ಗದಲ್ಲಿ ಸಮಸ್ಥಿತಿಯನ್ನು ಕಾಯ್ದುಕೊಂಡು ಬರಲು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ,  ಎಂದು ಹೇಳಿದರು.

ಸೋಹಂ ಸಮೂಹದ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿ ಅವರು, “ಹಸಿರು ಮರಗಳು ಅಮೂಲ್ಯ ರಾಷ್ಟ್ರೀಯ ಸಂಪನ್ಮೂಲಗಳು. ಪ್ರಾಣಿ, ಪಕ್ಷಿ ಸಂಕುಲಗಳಿಗೆ ಆವಾಸ ಸ್ಥಾನವನ್ನು ಒದಗಿಸುವದಲ್ಲದೇ ತಲೆತಲಾಂತರಗಳವರೆಗೂ ತಲುಪುವ ಆನಂದದಾಯಕ ನೈಸರ್ಗಿಕ ತಾಣಗಳನ್ನು ನಿರ್ಮಿಸುತ್ತವೆ. ಗಿಡಗಳನ್ನು ನೆಡುವುದು ನಮ್ಮ ಸ್ವಾಭಾವಿಕ ಪರಿಸರವನ್ನು ಹಸಿರಿನಿಂದ ಆಚ್ಛಾದಿಸಿ ವಾತಾವರಣವನ್ನು ಸುಧಾರಿಸುತ್ತದೆಯಲ್ಲದೇ ನಮ್ಮ ಆರ್ಥಿಕ ಅಭಿವೃದ್ಧಿಗೂ ಎಡೆಮಾಡಿಕೊಡುತ್ತದೆ. ಬದಲಾಗುತ್ತಿರುವ ಪರಿಸರ ಮತ್ತು ಜೀವವೈವಿಧ್ಯಗಳ ಸವಾಲುಗಳಿಗೆ ಗಿಡಗಳನ್ನು ನೆಡುವ ಮೂಲಕ ಸಾರ್ವಜನಿಕ ಅಭಿವ್ಯಕ್ತಿಯನ್ನು ನೀಡಬಹುದು,  ಎಂದರು.

Leave a Reply

Please enter your comment!
Please enter your name here