ಮಂಗಳೂರು: ಸಿಸಿಬಿ ಪೋಲಿಸರಿಂದ ಕೊಲೆ ಸಂಚು ಆರೋಪಿಗಳ ಬಂಧನ

ಮಂಗಳೂರು:  ನಗರದ ಅಡ್ಯಾರು ಗ್ರಾಮದ ಅಡ್ಯಾರು ಕಡವಿನ ಬಳಿಯಲ್ಲಿ  ವ್ಯಕ್ತಿವೋರ್ವರ ಕೊಲೆಗೆ ಸಂಚು ರೂಪಿಸಿದ  5 ಮಂದಿಯನ್ನು ದಸ್ತಗಿರಿ ಮಾಡಿ 3 ತಲವಾರುಗಳು, ಚೂರಿ ಹಾಗೂ ಮಾರುತಿ ಒಮ್ನಿ  ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಜಿಯಾ @ ಎ.ಕೆ ರಿಯಾಸ್, (30), ಅಜ್ಮಲ್ @ ಅಜ್ಜು, (22), ಮುಸ್ತಾಕ್ ಅಹಮ್ಮದ್, (21), ಮೊಹಮ್ಮದ್ ಫಜಲ್,(21), ಬಾಶಿತ್, (21) ಎಂದು ಗುರುತಿಸಲಾಗಿದೆ.

murder-attempt-arrest 03-02-2016 22-16-53 murder-attempt-arrest 03-02-2016 22-18-31 murder-attempt-arrest 03-02-2016

ಘಟನೆಯ ವಿವರ : ದಿನಾಂಕ: 03-02-2016 ರಂದು ಬೆಳಿಗ್ಗೆ ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಕಡವಿನ ಬಳಿ ಸಿಲ್ವರ್ ಬಣ್ಣದ ಮಾರುತಿ ಒಮ್ನಿ ಕಾರಿನಲ್ಲಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ವೆಲೆಂಟೈನ್ ಡಿ ಸೋಜಾ ಮತ್ತು ಸಿಬ್ಬಂದಿಯವರು ಸದ್ರಿ ಸ್ಥಳಕ್ಕೆ ದಾಳಿಮಾಡಿ ಸ್ಥಳದಲ್ಲಿದ್ದ ಆರೋಪಿಗಳನ್ನು ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ 3 ತಲವಾರುಗಳು, 2 ಚೂರಿ, 7 ಮೊಬೈಲ್ ಫೋನ್ ಗಳು, ಹಾಗೂ ಮಾರುತಿ ಒಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಆರೋಪಿಗಳ ಪೈಕಿ ಜಿಯಾ @ ಎ.ಕೆ ರಿಯಾಸ್ ಎಂಬಾತನು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರಿನಲ್ಲಿ 2014 ನೇ ಇಸವಿಯಲ್ಲಿ ಇಜಾಝ್ ಎಂಬಾತನ ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತದೆ. ಸುಮಾರು ಒಂದು ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದನು. ಅಜ್ಮಲ್ @ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಇಜಾಝ್ ಎಂಬಾತನ ಕೊಲೆ ಪ್ರಕರಣ, ಬಂಟ್ವಾಳ ನಗರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ಮುಸ್ತಾಕ್ ಅಹಮ್ಮದ್  ಹಾಗೂ ಮೊಹಮ್ಮದ್ ಫಝಲ್ ಎಂಬವರು ಇಜಾಝ್ ಎಂಬಾತನ ಕೊಲೆ ಯತ್ನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ. ಬಾಶಿತ್ ಎಂಬಾತನ ವಿರುದ್ದ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ  ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿರುತ್ತದೆ.

ಈ ಹಿಂದೆ 2011 ನೇ ಇಸವಿಯಲ್ಲಿ ಕಣ್ಣೂರಿನ ಅಬ್ದುಲ್ ರಹಿಮಾನ್ @ ಸಣ್ಣ ಪುತ್ತ ಎಂಬಾತನನ್ನು ಇಜಾಝ್ ಮತ್ತು ಇತರರು ಮಾಡಿದ್ದು, ಈ ಕೊಲೆಗೆ ಪ್ರತಿಕಾರವಾಗಿ 2014 ನೇ ಇಸವಿಯಲ್ಲಿ ಜಿಯಾ @ ಎ.ಕೆ ರಿಯಾಸ್, ಅಜ್ಮಲ್ @ ಅಜ್ಜು, ಮುಸ್ತಾಕ್ ಅಹಮ್ಮದ್, ಮೊಹಮ್ಮದ್ ಫಜಲ್  ಹಾಗೂ ಇತರರು ಸೇರಿ ಕೊಲೆ ನಡೆಸಿದ್ದು, ಆರೋಪಿಗಳು ಇದೇ ರೀತಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಈ ರೀತಿ ಸಂಚು ರೂಪಿಸಿ ಮಾರಾಕಾಯುಧಗಳೊಂದಿಗೆ ತಿರುಗಾಡುತ್ತಿದ್ದುದಾಗಿದೆ.

ಪೊಲೀಸ್ ಕಮೀಷನರ್ ಶ್ರೀ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here