ಮಂಗಳೂರು: ಸುರತ್ಕಲ್ ಬಂಟರ ಸಂಘಕ್ಕೆ ರಂಗ್‍ದೈಸಿರಿ ಪ್ರಶಸ್ತಿ

ಮಂಗಳೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ನಿರ್ದೇಶನದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ ಬಂಟರ ಕಲಾವೈಭವದ ರಂಗ್‍ದೈಸಿರಿ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘವು ಪ್ರಥಮ ಪ್ರಶಸ್ತಿಯೊಂದಿಗೆ 25 ಸಾವಿರ ರೂ. ನಗದನ್ನು ತನ್ನದಾಗಿಸಿಕೊಂಡಿತು.

1-bunts-20151013 2-bunts-20151013-001 3-bunts-20151013-002 4-bunts-20151013-003 5-bunts-20151013-004 6-bunts-20151013-005 7-bunts-20151013-006 8-bunts-20151013-007

30ನಿಮಿಷದ ಸ್ಪರ್ಧಾ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಒಟ್ಟು ಏಳು ತಂಡಗಳು ಭಾಗವಹಿಸಿತ್ತು. ಪ್ರಥಮ ಪ್ರಶಸ್ತಿ ಪಡೆದ ಸುರತ್ಕಲ್ ಬಂಟರ ಸಂಘದ ಸದಸ್ಯರು ಮೂವತ್ತು ನಿಮಿಷದ ಕಾಲಾವಧಿಯಲ್ಲಿ ಗುತ್ತಿನ ಮನೆ, ಕೃಷಿ ಚಟುವಟಿಕೆ, ಬಂಟರ ಬದುಕು, ಜನಜೀವನ, ಹಾಸ್ಯಪ್ರಹಸನ, ಹಬ್ಬಗಳ ಆಚರಣೆ, ಕೆಡ್ಡಸ ನೃತ್ಯ, ಕೊಜಂಬು, ಕರಪತ್ತಾವುನು, ಯಕ್ಷಗಾನ, ನಾಗಾರಾಧನೆ, ಭೂತಾರಾಧನೆ, ಉತ್ತರ ಕ್ರಿಯೆ ಹೀಗೆ ತುಳು ಸಂಸ್ಕೃತಿ ಜತೆ ಜತೆಗೆ ಸಾಗಿ ಬಂದ ಜೀವನ ಪದ್ಧತಿಯ ಚಿತ್ರಣವನ್ನು ಅನಾವರಣಗೊಳಿಸಿದರು. ನವೀನ್ ಶೆಟ್ಟಿ ಅಳಕೆ ಅವರ ಮಾರ್ಗದರ್ಶನದಲ್ಲಿ ಉಲ್ಲಾಸ್ ಆರ್.ಶೆಟ್ಟಿ ನಿರ್ದೇಶನದಲ್ಲಿ ಎರಡು ತಿಂಗಳ ಮಗುವಿನಿಂದ 85 ವರ್ಷಪ್ರಾಯದ ಅಜ್ಜಿಯೊಂದಿಗೆ ಸುಮಾರು 110 ಮಂದಿ ಕಲಾವಿದರು ಭಾಗವಹಿಸಿದ್ದರು.

ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು. ಲೀಲಾಧರ ಶೆಟ್ಟಿ ಮತ್ತು ಸುಧಾಕರ ಪೂಂಜ ಸಹಕರಿಸಿದ್ದರು. ಸುರತ್ಕಲ್ ಬಂಟರ ಸಂಘಕ್ಕೆ ಪ್ರಶಸ್ತಿಯನ್ನು ಪುತ್ತೂರು ಯುವ ಬಂಟರ ಸಂಘದ ಅಧ್ಯಕ್ಷ ರೋಶನ್ ರೈ ಬನ್ನೂರು, ಪುತ್ತೂರು ಉಪ ವಿಭಾಗದ ಡಿವೈಎಸ್‍ಪಿ ಭಾಸ್ಕರ ರೈ ವಿತರಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಹಾಸ ಶೆಟ್ಟಿ ರಂಗೋಲಿ, ಸೀತಾರಾಮ ರೈ ಕೈಕಾರ, ಶಶಿರಾಜ್ ಶೆಟ್ಟಿ ಕೊಳಂಬೆ, ಅಶ್ವತ್ತಾಮ ಹೆಗ್ಡೆ ಉಪಸ್ಥಿತರಿದ್ದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾ ಧರ ಶೆಟ್ಟಿ , ಗುಣಕರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ದ್ವಿತೀಯ ಪ್ರಶಸ್ತಿಯನ್ನು ಗುರುಪುರ ಬಂಟರ ಸಂಘ ಹಾಗೂ ತೃತೀಯ ಪ್ರಶಸ್ತಿಯನ್ನು ಜಪ್ಪಿನಮೊಗರು ಬಂಟರ ಸಂಘ ಪಡೆದು ಕೊಂಡಿತು. ತೀರ್ಪುಗಾರರಾಗಿ ಅಶೋಕ್ ಆಳ್ವ, ನಯನ ವಿ.ರೈ,  ರಾಜೀವ ಶೆಟ್ಟಿ ಸಹಕರಿಸಿದರು.

Leave a Reply

Please enter your comment!
Please enter your name here