ಮಂಗಳೂರು: ಸೋಮೇಶ್ವರ -ಉಚ್ಚಿಲ ಬೀಚಿನಲ್ಲಿ ಹಾಸನದ ನಾಲ್ವರು ಯುವಕರು ನೀರು ಪಾಲು

ಮಂಗಳೂರು: ಸಮುದ್ರಕ್ಕೆ ಈಜಲು ತೆರಳಿದ ಹಾಸನ ಮೂಲದ ನಾಲ್ವರು ಯುವಕರು ನೀರುಪಾಲಾದ ಘಟನೆ ಸೋಮೇಶ್ವರ -ಉಚ್ಚಿಲ್ ಬೀಚ್ ಬಳಿ ರವಿವಾರ ನಡೆದಿದೆ.
ಮೃತರನ್ನು ಹನೀಫ್ (24), ತುಫೈಲ್ (23), ಇಮ್ರಾನ್ ಪಾಶಾ(24), ಹಾಗೂ ಸಯೀದ್ ಕಲೀಮ್ (25) ಎಂದು ಗುರುತಿಸಲಾಗಿದೆ. ಸಾದಿಕ್ ಮತ್ತು ಸಹೀರ್ ಇನ್ನಿಬರು ಕೂಡ ಸಮುದ್ರದ ಸುಳಿಗೆ ಸಿಲುಕಿದ್ದು, ಅವರನ್ನು ರಕ್ಷಿಸಲಾಗಿದೆ.
ಹಾಸನ ಮೂಲದ ಆರು ಮಂದಿ ಯುವಕರ ತಂಡವು ಉಳ್ಳಾಲ ಪ್ರವಾಸಕ್ಕೆ ಬಂದಿದ್ದು, ಮಧ್ಯಾಹ್ನ ಸೋಮೇಶ್ವರ ಕಡಲ ಕಿನಾರೆಗೆ ತೆರಳಿ, ಸಮುದ್ರದಲ್ಲಿ ಈಜಲು ಇಳಿದ್ದರು. ಆ ವೇಳೆ ಅಲೆಗಳಿಗೆ ಸಿಲುಕಿದ ಹನೀಫ್ , ತುಫೈಲ್ , ಇಮ್ರಾನ್ ಪಾಶಾ, ಹಾಗೂ ಸಯೀದ್ ಕಲೀಮ್ ನೀರು ಪಾಲಾಗಿದ್ದು ಸಾದಿಕ್ ಮತ್ತು ಸಹೀರ್ನನ್ನು ಸ್ಥಳೀಯರು ರಕ್ಷಿಸಿದ್ದಾರೆ.

Leave a Reply