ಮಂಗಳೂರು: ಸ್ನಾತಕೋತ್ತರ ಪದವಿ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ , ಶುಲ್ಕವನ್ನು ಇಳಿಸಿದ ವಿಶ್ವವಿದ್ಯಾನಿಲಯ

ಮಂಗಳೂರು: ಸ್ನಾತಕೋತ್ತರ ಕೋರ್ಸುಗಳ ಸ್ವ`ವಿತ್ತೀಯ ಶುಲ್ಕನ್ನು ಇಳಿಸುವಂತೆ ಆಗ್ರಹಿಸಿ ಎಬಿವಿಪಿ ಇಂದೂ ಸಹ ವಿಶ್ವವಿದ್ಯಾನಿಲಯ ಆಡಳಿತ ಕಛೇರಿ ಮತ್ತು ಕೌನ್ಸಿಲಿಂಗ್ ಕೇಂದ್ರದ ಎದುರು ಪ್ರತಿಭಟನೆಯನ್ನು ನಡೆಸಿತು.

abvp

ಜುಲೈ 21 ರಂದು ಎಬಿವಿಪಿ ನಿಯೋಗ ಉಪಕುಲಪತಿಗಳನ್ನು ಭೇಟಿ ಮಾಡಿ ಶುಲ್ಕವನ್ನು ಇಳಿಸಬೇಕೆಂದು ಆಗ್ರಹಿಸಿತ್ತು. ಎಬಿವಿಪಿ ಮನವಿಗೆ ಸ್ಪಂದಿಸಿದ  ವಿವಿಯ ಆಡಳಿತ ಮಂಡಳಿ ಮೆರಿಟ್ ಕೋಟಾದ ಶುಲ್ಕವನ್ನು ಇಳಿಸಿತ್ತು. ಆದರೆ ಏರಿಕೆ ಮಾಡಿಲಾಗಿದ್ದ ಸ್ವವಿತ್ತೀಯ ಕೋಟದ ಶುಲ್ಕವನ್ನು ಇಳಿಸದ ವಿವಿಯ ಕ್ರಮವನ್ನು ಖಂಡಿಸಿ ಹಾಗೂ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ದಿನಾಂಕ  ಜುಲೈ 27ರಿಂದ ಎಬಿವಿಪಿ ವಿವಿಯ ಆವರಣದಲ್ಲಿ ನಿರಂತರ ಹೋರಾಟ ನಡೆಸಿತ್ತು.

ಎಬಿವಿಪಿ ಹೋರಾಟಕ್ಕೆ ಮಣಿದ ವಿಶ್ವವಿದ್ಯಾನಿಲಯವು, ಏರಿಕೆ ಮಾಡಲಾಗಿದ್ದ ಸ್ವವಿತ್ತೀಯ ಶುಲ್ಕವನ್ನು ಇಳಿಸಲು ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಿತು. ಇದು ಎಬಿವಿಪಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿ ನಿರಂತರವಾಗಿ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದು ಎಬಿವಿಪಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply