ಮಂಗಳೂರು: ಹನಿಟ್ರ್ಯಾಪ್ ಬ್ಲ್ಯಾಕ್ ಮೇಲ್ 8 ಮಂದಿಯ ಬಂಧನ

ಮಂಗಳೂರು: ಬಂಟ್ವಾಳ ಎಎಸ್ಪಿ ಮತ್ತು ಡಿಸಿಐಬಿ ಜಂಟಿ ಕಾರ್ಯಾಚರಣೆಯಲ್ಲಿ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 8 ಜನರ ತಂಡವನ್ನು ಪೋಲಿಸರು ಬಂಧಿಸಿದ್ದಾರೆ.

4-blackmail-arrested-20150731-003

ಬಂಧಿತರನ್ನು ಮಹಮ್ಮದ್ ಅಸೀಫ್ (25), ಅಬ್ದುಲ್ ಲತೀಫ್ , ಸಾಭೀರ್, ಅಬುಬಕ್ಕರ್ ಸಿದ್ದೀಕ್, ಸುಲೈಮಾನ್, ಅಬ್ದುಲ್ ಮಜೀದ್, ಫಾಸಿಮ್ ಹಾಗೂ ಝರೀನಾ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಜುಳೈ 27 ರಂದು ಆಶೀಫ್ ಗೋಳಿಯಂಗಡಿ ಎಂಬಾತ ತನ್ನ ಪರಿಚಯದ ಅಬ್ದುಲ್ ಬಶೀರ್ ಎಂಬವರಿಗೆ ಫೋನ್ ಮಾಡಿ ತನ್ನ ಪರಿಚಯದ ಒರ್ವ ಹೆಂಗಸನ್ನು ಬೆಳ್ತಂಗಡಿ ಲಾಯಿಲದಿಂದ ಉಜಿರೆಗೆ ಬಿಡುವಂತೆ ತಿಳಿಸಿದ್ದು, ಅಬ್ದುಲ್ ಬಶೀರ್ ತನ್ನ ಸಂಬಂಧಿ ಮಹಮ್ಮದ್ ಹ್ಯಾರೀಸ್ ಎಂಬವರ ಆಟೋದಲ್ಲಿ ಉಜಿರೆಗೆ ಹೆಂಗಸನ್ನು ಬಿಡಲು ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಮೇಲಿನ ಆರೋಪಿಗಳು ಅಟೋರೀಕ್ಷಾವನ್ನು ತಡೆದು ಒಂದು ರಿಡ್ಜ್ ಕಾರು ಮತ್ತು ಬೊಲೆರೋ ಜೀಪಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದು, ನಂತರ ಹೆಂಗಸಿನೊಂದಿಗೆ ಬಶೀರನ್ನನ್ನು ಕುಳ್ಳಿರಿಸಿ ಫೋಟೊ ತೆಗೆದು ಹತ್ತು ಲಕ್ಷ ಹಣವನ್ನು ನೀಡಬೇಕು ಇಲ್ಲವಾದ ಫೋಟೊವನ್ನು ವಾಟ್ಸಾಪ್ ನಲ್ಲಿ ಹಾಕಿ ರೇಪ್ ಕೇಸನ್ನು ದಾಖಲಿಸುತ್ತೇವೆ ಎಂದು ಬೆದರಿಸಿದ್ದಾರೆ. ಅಲ್ಲದೆ ರಿಕ್ಷಾ ಚಾಲಕ ಹ್ಯಾರಿಸ್ ಹಾಗೂ ಬಶೀರ್ ನನ್ನು ವೇಣೂರು ಹತ್ತಿರದ ನೈನಾಡ್ ಎಂಬಲ್ಲಿ ಮನೆಯೊಂದರಲ್ಲಿ ಕೂಡಿ ಹಾಕಿ ಅವರಲ್ಲಿದ್ದ ನಗದು 4500, ಲಾವಾ ಕಂಪೆನಿಯ ಎರಡು ಮೊಬೈಲ್ ಹಾಗು ಪಾಸ್ ಪೋರ್ಟ್, ರಿಕ್ಷಾ ಇವುಗಳನ್ನು ಕಿತ್ತುಕೊಂಡು ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಪೋಲಿಸರು ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ರಿ ಕಾರ್ಯಾಚರಣೆಯು ಜಿಲ್ಲಾ ಎಸ್ಪಿ ಡಾ ಶರಣಪ್ಪ, ಎಸ್ ಡಿ ಐ ಪಿ ಎಸ್ ಹೆಚ್ಚುವರಿ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ ಿವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಎಎಸ್ ಪಿ ಸಂಜೀವ ಪುರುಷ ಮತ್ತು ತಂಡ ಭಾಗವಹಿಸಿದ್ದು, ತಂಡದ ಕಾರ್ಯವೈಖರಿಯನ್ನು ಡಿಜಿ & ಐಜಿಪಿ ಕರ್ನಾಟಕ ರಾಜ್ಯ ಬೆಂಗಳೂರು ಹಾಗು ಪೋಲಿಸ್ ಮಹಾನೀರಿಕ್ಷರು ಪಶ್ಚಿಮ ವಲಯ ಮಂಗಳೂರು ಇರವು ಶ್ಲಾಘಿಸಿದ್ದಾರೆ.

Leave a Reply