ಮಂಗಳೂರು: ಹರೀಶ್ ಕೊಲೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಂಟ್ವಾಳ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಇಬ್ಬರು ಆರೋಪಿಗಳಾದ ಭುವಿತ್ ಶೆಟ್ಟಿ (25), ಅಚ್ಯುತ್ (28) ಎಂಬುವವರನ್ನು ಗುರುವಾರ ಬಂಧಿಸಿದ್ದಾರೆ.

1-police-20151119 2-police-20151119-001 3-police-20151119-002 5-police-20151119-004 4-police-20151119-003

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಅವರು ನವೆಂಬರ್ 12 ರಂದು ಹರೀಶ್ ಅವರು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಐದು ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಹರೀಶ್ ಮತ್ತು ಆತನ ಗೆಳೆಯ ಸಮೀವುಲ್ಲಾ ಮೇಲೆ ಹಲ್ಲೆ ನಡೆಸಿದ್ದರು. ಅಪರಿಚಿತ ವ್ಯಕ್ತಿಗಳು ಸಮೀವುಲ್ಲಾ ಮತ್ತು ಹರೀಶ್ ಒಂದೇ ಕೋಮಿಗೆ ಸೇರಿದವರು ಎಂದು ಧಾಳಿ ನಡೆಸಿದ್ದರು. ಆದರೆ ಇಬ್ಬರು ಬೇರೆ ಬೇರೆ ಕೋಮಿಗೆ ಸಂಬಂಧಿಸಿದವರಾಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಕೊನೆಗೆ ಆರೋಪಿಗಳ ಎಲ್ಲಾ ಚಲನವಲನಗಳನ್ನು ಗುರುತಿಸಿ ಬಳಿಕ ಭುವಿತ್ ಶೆಟ್ಟಿ ಹಾಗೂ ಅಚ್ಯುತ್ ಅವರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಮೂರು ಮಂದಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.
ಆರೋಪಿಗಳ ವಿಚಾರಣೆಯ ವೇಳೆ ಹರೀಶ್ ಮತ್ತು ಸಮೀವುಲ್ಲಾ ಒಂದೇ ಕೋಮಿನವರು ಎನ್ನುವುದನ್ನು ಭಾವಿಸಿ ಧಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಧಾಳಿಯ ತೀವೃತೆಗೆ ಹರೀಶ್ ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಮೃತಪಟ್ಟರೆ, ಆತನ ಗೆಳೆಯ ಸಮೀವುಲ್ಲಾ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿತ್ತು ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಶರಣಪ್ಪ, ವಿನ್ಸೆಂಟ್ ಶಾಂತ ಕುಮಾರ್ ಹಾಗೂ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ರಾಹುಲ್ ಉಪಸ್ಥಿತರಿದ್ದರು.

Leave a Reply